Ad imageAd image

ಹರಿಯಾಣ, ಜಮ್ಮು ಚುನಾವಣೆ: ಯಾರೂ ಹೆಚ್ಚು ಸಂಭ್ರಮಿಸುವಂತಿಲ್ಲ!

ಕಣಿವೆ ನಾಡು ಜಮ್ಮು ಮತ್ತು ಕಾಶ್ಮೀರ್ ಹಾಗೂ ಹರಿಯಾಣ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಹಾಗೂ ಕಮಲ ಪಡೆಗೆ ಸಹಿ-ಕಹಿ ಅನುಭವವಾಗಿದೆ.

Nagesh Talawar
ಹರಿಯಾಣ, ಜಮ್ಮು ಚುನಾವಣೆ: ಯಾರೂ ಹೆಚ್ಚು ಸಂಭ್ರಮಿಸುವಂತಿಲ್ಲ!
WhatsApp Group Join Now
Telegram Group Join Now

ಪ್ರಜಾಸ್ತ್ರ ಸುದ್ದಿ

ನವದೆಹಲಿ(New Delhi): ಕಣಿವೆ ನಾಡು ಜಮ್ಮು ಮತ್ತು ಕಾಶ್ಮೀರ್ ಹಾಗೂ ಹರಿಯಾಣ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಹಾಗೂ ಕಮಲ ಪಡೆಗೆ ಸಹಿ-ಕಹಿ ಅನುಭವವಾಗಿದೆ. ಹರಿಯಾಣದ ಚುನಾವಣೆಯ ಮತದಾನೋತ್ತರ ಸಮೀಕ್ಷೆ ಉಲ್ಟಾ ಆಗಿದೆ. ಇಲ್ಲಿನ ಜನತೆ ಎರಡು ಬಾರಿ ಗೆಲ್ಲಿಸಿರುವ ಬಿಜೆಪಿ ಬಿಟ್ಟು ಕಾಂಗ್ರೆಸ್ ಕೈ ಹಿಡಿಯಲಿದ್ದಾರೆ ಎನ್ನಲಾಗಿತ್ತು. ಅದಾಗಿಲ್ಲ. ಬಿಜೆಪಿ ಹ್ಯಾಟ್ರಿಕ್ ಗೆಲುವು ದಾಖಲಿಸಿದೆ. 90 ಸ್ಥಾನಗಳಲ್ಲಿ ಬಿಜೆಪಿ 47 ಸ್ಥಾನಗಳೊಂದಿಗೆ ಸ್ಪಷ್ಟ ಬಹುಮತ ಪಡೆದಿದೆ. 37 ಸ್ಥಾನ ಪಡೆದಿರುವ ಕಾಂಗ್ರೆಸ್ ಸೋತರೂ ಹೀನಾಯ ಸೋಲು ಎನ್ನುವಂತಿಲ್ಲ. ಐಎನ್ಎಲ್ ಡಿ 2 ಹಾಗೂ ಪಕ್ಷೇತರರು 3 ಸ್ಥಾನಗಳಲ್ಲಿ ಗೆಲುವು ಸಾಧಿಸಿದ್ದಾರೆ.

ಇನ್ನು ಜಮ್ಮು ಮತ್ತು ಕಾಶ್ಮೀರದಲ್ಲಿ ಕಾಂಗ್ರೆಸ್ ಹಾಗೂ ಎನ್ ಸಿ ಮೈತ್ರಿಕೂಟಕ್ಕೆ ಸ್ಪಷ್ಟಬಹುಮತ ಸಿಕ್ಕಿದೆ. ಇಲ್ಲಿಯೂ ಸಹ 90 ಸ್ಥಾನಗಳಿದ್ದು, ಇಲ್ಲಿ ಕಾಂಗ್ರೆಸ್ ಹಾಗೂ ನ್ಯಾಷನಲ್ ಕಾನ್ಫ್ ರೆನ್ಸ್ ಪಕ್ಷಕ್ಕೆ 49 ಸ್ಥಾನಗಳು ಬಂದರೆ, ಬಿಜೆಪಿಗೆ 29 ಸ್ಥಾನಗಳು ಬಂದಿವೆ. ಜೆಕೆಪಿಡಿಪಿ 3 ಹಾಗೂ ಪಕ್ಷೇತರರು 9 ಕಡೆ ಗೆಲುವು ಸಾಧಿಸಿದ್ದಾರೆ. ಆರ್ಟಿಕಲ್ 370 ತೆಗೆದು ಹಾಕಿದ ಬಳಿಕ ದೊಡ್ಡ ಮಟ್ಟದ ಬದಲಾವಣೆಯಾಗಿದೆ. ಇದಕ್ಕೆ ಬಿಜೆಪಿಯ ಕೇಂದ್ರ ಸರ್ಕಾರವೇ ಕಾರಣ. ಇದರ ಲಾಭ ಖಂಡಿತ ತಮಗೆ ಆಗುತ್ತೆ ಎನ್ನುವ ಲೆಕ್ಕಾಚಾರ ಉಲ್ಟಾ ಆಗಿದೆ. ಈ ಬಗ್ಗೆ ಮಾಜಿ ಮುಖ್ಯಮಂತ್ರಿಗಳಾದ ಮಹಿಬೂಬ್ ಮುಫ್ತಿ ಹಾಗೂ ಓಮರ್ ಅಬ್ದುಲ್ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಚುನಾವಣೋತ್ತರ, ಮತದಾನೋತ್ತರ ಸಮೀಕ್ಷೆ, ಮತ ಹಂಚಿಕೆ ಏನೇ ಇದ್ದರೂ ಜನರು ತೀರ್ಪು ಎಲ್ಲರೂ ಒಪ್ಪಿಕೊಳ್ಳಬೇಕಾಗಿದೆ. ಹರಿಯಾಣದಲ್ಲಿ ಬಿಜೆಪಿ ಹ್ಯಾಟ್ರಿಕ್ ಗೆಲುವಿಗೆ ಬ್ರೇಕ್ ಹಾಕಬೇಕೆಂಬ ಕಾಂಗ್ರೆಸ್ ಕನಸು ನನಸಾಗದಿದ್ದರೂ ಗಟ್ಟಿಯಾದ ವಿಪಕ್ಷ ಸ್ಥಾನ ಸಿಕ್ಕಿದ್ದು ಆಡಳಿತ ಪಕ್ಷದ ಮೂಗುದಾರ ಹಿಡಿಯಲು ಸಾಕಷ್ಟು ಅವಕಾಶಗಳಿವೆ. ಕಣಿವೆ ನಾಡಿನಲ್ಲಿ ಬಿಜೆಪಿ ಗೆಲುವು ದೊರೆಯದಿದ್ದರೂ 29 ಸ್ಥಾನಗಳ ಗೆಲುವು ಒಂದಿಷ್ಟು ಆಶಾಭಾವನೆ ಮೂಡಿಸಿದೆ. ಹೀಗಾಗಿ ಯಾರೂ ಇಲ್ಲಿ ದೊಡ್ಡ ಮಟ್ಟದಲ್ಲಿ ಸಂಭ್ರಮಿಸುವ ಹಾಗೂ ಬೇಸರ ಮಾಡಿಕೊಳ್ಳುವ ಪರಿಸ್ಥಿತಿ ಇಲ್ಲ ಎನ್ನಬಹುದು.

WhatsApp Group Join Now
Telegram Group Join Now
Share This Article