ಪ್ರಜಾಸ್ತ್ರ ಸುದ್ದಿ
ಕಲಬುರಗಿ(Kalaburagi): ಬಿಜೆಪಿ ರಾಜ್ಯಾಧ್ಯಕ್ಷ(State President) ಸ್ಥಾನದ ಜಟಾಪಟಿ ಜೋರಾಗಿದೆ. ವಿಜಯೇಂದ್ರರನ್ನು ಕೆಳಗೆ ಇಳಿಸಲೇಬೇಕು ಎಂದು ಪಣ ತೊಟ್ಟಿರುವ ಶಾಸಕರಾದ ಯತ್ನಾಳ, ರಮೇಶ ಜಾರಕಿಹೊಳಿ ಟೀಂ ಅಧ್ಯಕ್ಷ ಚುನಾವಣೆಯಲ್ಲಿ(Election) ತಮ್ಮ ಅಭ್ಯರ್ಥಿ ಇರುವುದು ಪಕ್ಕಾ ಎಂದಿದ್ದಾರೆ. ಈ ಬಗ್ಗೆ ಕಲಬುರಗಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ವಿಜಯಪುರ ಶಾಸಕ ಬಸನಗೌಡ ಪಾಟೀಲ ಯತ್ನಾಳ, ವಾಲ್ಮೀಕಿ ಸಮುದಾಯದಿಂದ ಶ್ರೀರಾಮುಲು ಅಧ್ಯಕ್ಷರಾದರೆ ನೋ ಪ್ರಾಬ್ಲಂ. ಲಿಂಗಾಯತ ಕೋಟಾದಡಿ ಬಂದರೆ ನಾನು ಇದ್ದೇನೆ ಎಂದಿದ್ದಾರೆ.
ನಾನೂ ಯಡಿಯೂರಪ್ಪನವರ(BSY) ಸಮಕಾಲೀನವನು. ಇವತ್ತಿನವನಲ್ಲ. ಯತ್ನಾಳ ದುಡ್ಡು ಹೊಡೆಯಲ್ಲ. ಕೆಲಸ ಮಾಡುತ್ತಾರೆ ಎಂದು ಜನರೆ ಹೇಳುತ್ತಾರೆ. ವಿಜಯೇಂದ್ರ ಹೋದರೆ ಪಕ್ಷಕ್ಕೆ ಒಳ್ಳೆಯದಾಗುತ್ತೆ. ಯಾರೂ ತಲೆ ಕೆಡಿಸಿಕೊಳ್ಳಬೇಡಿ. ಒಂದು ವೇಳೆ ವಿಜಯೇಂದ್ರ ಮುಂದುವರೆದರೆ ನಮ್ಮ ಹೋರಾಟ ಮುಂದುವರಿಸುವ ಕುರಿತು ತಿಳಿಸುತ್ತೇವೆ ಎಂದು ಹೇಳಿದ್ದಾರೆ.