ಪ್ರಜಾಸ್ತ್ರ ಸುದ್ದಿ
ವೆನೆಜುವೆಲಾದ ರಾಜಕಾರಣಿ ಹಾಗೂ ಕೈಗಾರಿಕಾ ಎಂಜಿನಿಯರ್ ಮಾರಿಯಾ ಕೊರಿನಾಗೆ 2025ನೇ ಸಾಲಿನ ನೊಬೆಲ್ ಶಾಂತಿ ಪ್ರಶಸ್ತಿ ಘೋಷಿಸಲಾಗಿದೆ. ತನ್ನ ದೇಶದ ಜನರಿಗೆ ಪ್ರಜಾಪ್ರಭುತ್ವದ ಹಕ್ಕುಗಳಿಗಾಗಿ ಸತತವಾಗಿ ಹೋರಾಟ ಮಾಡಿಕೊಂಡು ಬರುತ್ತಿದ್ದಾರೆ. ಸರ್ವಾಧಿಕಾರದ ವಿರುದ್ದ ಅವರ ಹೋರಾಟಗಳು ತೀವ್ರವಾಗಿರುತ್ತವೆ. ಹೀಗಾಗಿ ನಾರ್ವೆಯ ನೊಬೆಲ್ ಶಾಂತಿ ಸಮಿತಿ, ಮಾರಿಯಾ ಕೊರಿನಾಗೆ ನೊಂಬಲ್ ಶಾಂತಿ ಪ್ರಶಸ್ತಿ ನೀಡಲು ನಿರ್ಧರಿಸಿದೆ.