Ad imageAd image

ವಿದ್ಯುತ್ ಬಿಲ್ ಪಾವತಿಸಲು ಸಿದ್ಧಗಂಗಾ ಮಠಕ್ಕೆ ನೋಟಿಸ್

Nagesh Talawar
ವಿದ್ಯುತ್ ಬಿಲ್ ಪಾವತಿಸಲು ಸಿದ್ಧಗಂಗಾ ಮಠಕ್ಕೆ ನೋಟಿಸ್
WhatsApp Group Join Now
Telegram Group Join Now

ಪ್ರಜಾಸ್ತ್ರ ಸುದ್ದಿ

ತುಮಕೂರು(Tumakoru): ತಾಲೂಕಿನ ಹೊನ್ನೇನಹಳ್ಳಿ ಕೆರೆಯಿಂದ ದೇವರಾಯಪಟ್ಟಣ ಕೆರೆಯವರೆಗೆ ಪೈಪ್ ಲೈನ್ ಕಾಮಗಾರಿಯನ್ನು ಕೆಐಎಡಿಬಿ ಮೂಲಕ ಪೂರ್ತಿ ಮಾಡಲಾಗಿದೆ. ಈ ನೀರನ್ನು ಸಿದ್ಧಗಂಗಾ ಮಠದ ದೈನಂದಿನ ಬಳಕೆಗೆ ಪಡೆಯಲಾಗಿದೆ ಎಂದು ಕೆಐಎಡಿಬಿ ಕಾರ್ಯಪಾಲಕ ಎಂಜಿನಿಯರ್ ಟಿ.ಎಸ್ ಲಕ್ಷ್ಮೀಶ್ ನೋಟಿಸ್ ನಲ್ಲಿ ತಿಳಿಸಿ, ನೀರು ಸರಬರಾಜು ಮಾಡಿದ ವಿದ್ಯುತ್ ಬಿಲ್ 70,31,438 ರೂಪಾಯಿ ಆಗಿದೆ. ಇದನ್ನು ಬೆಸ್ಕಾಂಗೆ ಪಾವತಿಸಬೇಕು ಎಂದು ಹೇಳಿದ್ದಾರೆ.

ಮುಂದುವರೆದ ಮಂಡಳಿಯ ಆರ್ಥಿಕ ಸ್ಥಿತಿ ಸುಸ್ಥಿಯಲ್ಲಿ ಇಲ್ಲ. ಹೀಗಾಗಿ ನೀರು ಸರಬರಾಜಿನ ವಿದ್ಯುತ್ ಬಿಲ್ ಮಠದಿಂದಲೇ ಪಾವತಿ ಮಾಡಬೇಕೆಂದು ಕೇಂದ್ರ ಕಚೇರಿಯಿಂದಲೇ ನಿರ್ದೇಶಿಸಲ್ಪಟ್ಟಿರುತ್ತದೆ ಎಂದು ನೋಟಿಸ್ ನಲ್ಲಿ ತಿಳಿಸಿದ್ದಾರೆ. ಇದಕ್ಕೆ ಉತ್ತರ ನೀಡಿರುವ ಮಠಾಧೀಶರಾಗಿರುವ ಸಿದ್ಧಲಿಂಗ ಸ್ವಾಮೀಜಿ, ದೇವರಾಯಪಟ್ಟಣ ಕೆರೆಯ ನೀರನ್ನು ಮಠದ ದೈನಂದಿನ ಬಳಕೆಗೆ ಪಡೆಯುತ್ತಿರುವುದಾಗಿ ನೀಡಿರುವ ವರದಿಯನ್ನು ಪುನರ್ ಪರಿಶೀಲನೆ ಮಾಡಬೇಕು. ಕುಡಿಯುವ ನೀರು ಒದಗಿಸುವುದು ಸರ್ಕಾರದ ಕರ್ತವ್ಯವಾಗಿದೆ. ಹಣ ಪಾವತಿ ಸಾಧ್ಯವಿಲ್ಲ ಎಂದು ಹೇಳಿದ್ದಾರೆ.

WhatsApp Group Join Now
Telegram Group Join Now
Share This Article