Ad imageAd image

ಸೆಟ್ಟೇರಿದ ‘ಓಜಿ’ 131ನೇ ಸಿನಿಮಾ

ಸ್ಯಾಂಡಲ್ ವುಡ್ ಸೆಂಚುರಿ ಸ್ಟಾರ್, ಓರಿಜಿನಲ್ ಗ್ಯಾಂಗ್ ಸ್ಟರ್ ಶಿವಣ್ಣನ 131ನೇ ಸಿನಿಮಾ ವರಮಹಾಲಕ್ಷ್ಮಿ ಹಬ್ಬವಾದ ಇಂದು(ಶುಕ್ರವಾರ) ಸೆಟ್ಟೇರಿದೆ.

Nagesh Talawar
ಸೆಟ್ಟೇರಿದ ‘ಓಜಿ’ 131ನೇ ಸಿನಿಮಾ
WhatsApp Group Join Now
Telegram Group Join Now

ಪ್ರಜಾಸ್ತ್ರ ಸುದ್ದಿ

ಸ್ಯಾಂಡಲ್ ವುಡ್ ಸೆಂಚುರಿ ಸ್ಟಾರ್, ಓರಿಜಿನಲ್ ಗ್ಯಾಂಗ್ ಸ್ಟರ್ ಶಿವಣ್ಣನ(Shiva Rajkumar) 131ನೇ ಸಿನಿಮಾ ವರಮಹಾಲಕ್ಷ್ಮಿ ಹಬ್ಬವಾದ ಇಂದು(ಶುಕ್ರವಾರ) ಸೆಟ್ಟೇರಿದೆ. ಆದರೆ, ಸಿನಿಮಾ ಟೈಟಲ್ ಇನ್ನು ರಿವೀಲ್ ಮಾಡಿಲ್ಲ. ಈಗಾಗ್ಲೇ ಟೀಸರ್ ರಿಲೀಸ್ ಮಾಡಲಾಗಿದೆ. ನಟ ಅಚ್ಯುತ್ ಕುಮಾರ್ ಕುರುಡನ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಶಿವಣ್ಣನ ಇಂಟರ್ ಡೆಕ್ಷನ್ ಹೇಳುತ್ತಾರೆ. ಅಲ್ಲಿ ಓಂ, ಜೋಗಿ ಮೂವಿ ಕಥೆಯ ಝಲಕ್ ಹೇಳಲಾಗುತ್ತೆ. ಮೊದಲ ಚಿತ್ರ ಆನಂದದ ಹಾಡು ಹೇಳುತ್ತಾ ಅಚ್ಯುತ್ ಕುಮಾರ್ ಪೊಲೀಸ್ ಸ್ಟೇಷನ್ ನಿಂದ ಹೋಗ್ತಿದ್ದನಂತೆ ಶಿವಣ್ಣನ ಸ್ಕೆಚ್ ಪ್ರಿಂಟ್ ಬರುತ್ತೆ. ಹಲೋ ನಾ ಯಾರಂತ ಗೊತ್ತಾಯ್ತಲ್ವಾ.. ಆದರೆ ಎಂತವನಂತ ಗೊತ್ತಿಲ್ಲ.. ಐ ಆಮ್ ಕಮಿಂಗ್ ಎನ್ನುವ ಡೈಲಾಗ್ ಮೂಲಕ ಕ್ರೇಜ್ ಕ್ರಿಯೇಟ್ ಮಾಡಲಾಗಿದೆ.

ತಮಿಳು ಚಿತ್ರ ನಿರ್ದೇಶಕ ಕಾರ್ತಿಕ್(Karthik Adwaith) ಅದ್ವೈತ್ ಮೊದಲ ಬಾರಿಗೆ ಕನ್ನಡ ಸಿನಿಮಾ ನಿರ್ದೇಶನ ಮಾಡುತ್ತಿದ್ದಾರೆ. ಇದರ ಮುಹೂರ್ತ ಕಾರ್ಯಕ್ರಮ ಇಂದು ನಡೆಯಿತು. ಇದೊಂದು ಪಕ್ಕಾ ಭೂಗತ ಜಗತ್ತಿನ ಕಥೆಯಿರುವ ಸಿನಿಮಾ(Flim) ಎನ್ನುವುದು ಟೀಸರ್ ನೋಡಿದ ಪ್ರತಿಯೊಬ್ಬರಿಗೂ ತಿಳಿಯುತ್ತೆ. ಎಸ್.ಎನ್ ರೆಡ್ಡಿ ಹಾಗೂ ಸುಧೀರ್.ಪಿ ಎನ್ನುವರು ಸಿನಿಮಾ ನಿರ್ಮಾಣ ಮಾಡುತ್ತಿದ್ದಾರೆ. ಸ್ಯಾಮ್.ಸಿ.ಎಸ್ ಸಂಗೀತವಿದೆ. ಎ.ಜೆ ಶೆಟ್ಟಿ ಕ್ಯಾಮೆರಾ ವರ್ಕ್ ಇದೆ. ಒಟ್ಟಿನಲ್ಲಿ ಶಿವಣ್ಣನ 131ನೇ ಸಿನಿಮಾ ಸಾಕಷ್ಟು ಕುತೂಹಲ ಮೂಡಿಸಿದೆ.

WhatsApp Group Join Now
Telegram Group Join Now
Share This Article