ಪ್ರಜಾಸ್ತ್ರ ಸುದ್ದಿ
ಫ್ರಾನ್ಸ್(Paris): ಪ್ಯಾರಿಸ್ ಒಲಿಂಪಿಕ್ಸ್-2024 ಕೀಡಾಕೂಟಕ್ಕೆ ಈಗಾಗ್ಲೇ ತೆರೆ ಬಿದ್ದಿದೆ. ಇದರ ನಡುವೆ ಒಂದಿಷ್ಟು ವಿವಾದಗಳು ನಡೆದಿವೆ. ಈಗ ಅಮೆರಿಕದ ಜಿಮ್ನಾಸ್ಟ್(gymnastics) ಜೋರ್ಡಾನ್ ಚಿಲೀಸ್(Jordan Chiles)ಅವರ ಕಂಚಿನ ಪದಕ ವಾಪಸ್ ಪಡೆದಿದೆ. ಅಂತಾರಾಷ್ಟ್ರೀಯ ಒಲಿಂಪಿಕ್ಸ್ ಕಮಿಟಿ ಕಂಚಿನ ಪದಕ ವಾಪಸ್ ಪಡೆಯುವ ಮೂಲಕ ಮತ್ತೆ ಚರ್ಚೆಯಲ್ಲಿದೆ.
ಕಂಚಿನ ಪದಕಕ್ಕಾಗಿ ನಡೆದ ಪಂದ್ಯದಲ್ಲಿ ರೋಮೆನಿಯಾದ ಸ್ಪರ್ಧಿ ಇದ್ದರು. ಫಲಿತಾಂಶದ ವೇಳೆ ಗೊಂದಲವಾಗಿತ್ತು. ಜೋರ್ಡಾನ್ ಕೋಚ್ ನಿರ್ಣಾಯಕರಿಗೆ ಮನವಿ ಸಲ್ಲಿಸಿದ್ದರು. ನಿಯಮದ ಅನುಸಾರ ಅವರಿಗೆ ಕಂಚು(Bronze) ಲಭಿಸಿತ್ತು. ಇದನ್ನು ಪ್ರಶ್ನಿಸಿ ಐಒಸಿ ಮೊರೆ ಹೋಗಿದ್ದು ರೋಮೆನಿಯಾ ಸ್ಪರ್ಧಿ.
ನಿಯಮದ ಪ್ರಕಾರ ಒಂದು ನಿಮಿಷದೊಳಗಾಗಿ ಮನವಿ ಸಲ್ಲಿಸಬೇಕು. ಚಿಲೀಸ್ ಒಂದು ನಿಮಿಷ 4 ಸೆಕೆಂಡ್ ತೆಗೆದುಕೊಂಡಿದ್ದಾರೆ. ಹೀಗಾಗಿ ಅವರಿಗೆ ನೀಡಿದ್ದ ಕಂಚಿನ ಪದಕ ರದ್ದು ಮಾಡಿ ತಮಗೆ ಕೊಡಬೇಕು ಎಂದು ಮನವಿ ಮಾಡಿದ್ದರು. ತನಿಖೆ ಮಾಡಿದ ಐಒಸಿ(IOC) 3ನೇ ಸ್ಥಾನ ರದ್ದುಗೊಳಿಸಿ ಕಂಚು ವಾಪಸ್ ಪಡೆದಿದೆ. ಅಮೆರಿಕ ಇದನ್ನು ಪ್ರಶ್ನಿಸಿ ಐಒಸಿಯ ನ್ಯಾಯಿಕ ಸಂಸ್ಥೆಯಾದ ಪ್ಯಾರಾ ಒಲಿಂಪಿಕ್ಸ್ ಗೆ ಹೋಗುವುದಾಗಿ ತಿಳಿಸಿದೆ. ಕಳೆದ ಶುಕ್ರವಾರ ಪಂದ್ಯ ನಡೆದಿತ್ತು.