ಪ್ರಜಾಸ್ತ್ರ ಸುದ್ದಿ
ನವದೆಹಲಿ(New Delhi): ಲೋಕಸಭೆಯಲ್ಲಿ(Parliament) ಚಳಿಗಾಲ ಅಧಿವೇಶನ ನಂಬರ್ 25 ಸೋಮವಾರದಿಂದ ಪ್ರಾರಂಭವಾಗಿದೆ. ಆದರೆ, ಮೊದಲ ದಿನವೇ ವಿಪಕ್ಷಗಳ ಭಾರಿ ಗದ್ದಲದಿಂದಾಗಿ ಕಲಾಪ ನಡೆಯಲಿಲ್ಲ. ನವೆಂಬರ್ 27, ಬುಧವಾರಕ್ಕೆ ಕಲಾಪವನ್ನು ಸಭಾಪತಿಗಳು ಮುಂದೂಡಿದರು.
ಸದನ ಪ್ರಾರಂಭವಾದ ಬಳಿಕ ಮೊದಲಿಗೆ ಪಶ್ಚಿಮ ಬಂಗಾಳದ ಬಸಿಹರ್ತ್ ಲೋಕಸಭಾ ಕ್ಷೇತ್ರದ ಸಂಸದ ನೂರುಲ್ ಇಸ್ಲಾಂ, ಮಹಾರಾಷ್ಟ್ರದ ನಾಂದೇಡ್ ಸಂಸದ ವಸಂತರಾವ್ ಚವಾಣ್ ಅವರ ನಿಧನಕ್ಕೆ ಸಂತಾಪ ಸೂಚಿಸಲಾಯಿತು. ನಂತರ ವಿವಿಧ ವಿಷಯಗಳನ್ನು ಪ್ರಸ್ತಾಪಿಸಿದ ವಿಪಕ್ಷಗಳ ನಾಯಕರು ಸರ್ಕಾರದ ಮುಗಿಬಿದ್ದರು. ಕಾಪವನ್ನು ಮಧ್ಯಾಹ್ನ 12ಕ್ಕೆ ಮುಂದೂಡಲಾಯಿತು.
12 ಗಂಟೆಯ ಬಳಿಕ ಮತ್ತೆ ಸದನ ಪ್ರಾರಂಭವಾಯಿತು. ವಿಪಕ್ಷಗಳು ಮತ್ತೆ ಗದ್ದಲು ಶುರು ಮಾಡಿದರು. ಉದ್ಯಮಿ ಗೌತಮ್ ಅದಾನಿ ವಿರುದ್ಧ ಅಮೆರಿಕ ಕೋರ್ಟ್ ಬಂಧನ ವಾರೆಂಟ್ ಹೊರಡಿಸಿದೆ. ಉದ್ಯಮಿ ವಿರುದ್ಧ ಕೇಳಿ ಬಂದಿರುವ ಆರೋಪ ಸಂಬಂಧ ತನಿಖೆ ನಡೆಸಬೇಕು ಎಂದು ಆಗ್ರಹಿಸಿದರು. ಉತ್ತರ ಪ್ರದೇಶದ ಸಂಭಲ್ ನಲ್ಲಿ ನಡೆಯುತ್ತಿರುವ ಹಿಂಸಾಚಾರ, ಮಣಿಪುರದಲ್ಲಿನ ಸಂಘರ್ಷ ಸೇರಿದಂತೆ ವಿವಿಧ ವಿಚಾರಗಳನ್ನು ಖಂಡಿಸಿ ವಾಗ್ದಾಳಿ ನಡೆಸಿದರು. ಸ್ಪೀಕರ್ ಹಲವು ಬಾರಿ ಮನವಿ ಮಾಡಿದರೂ ವಿಪಕ್ಷಗಳ ಸದಸ್ಯರು ಕೇಳದೆ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು. ಹೀಗಾಗಿ ಕೊನೆಗೆ ಬುಧವಾರಕ್ಕೆ ಕಲಾಪ(Session) ಮುಂದೂಡಲಾಯಿತು.