ಪ್ರಜಾಸ್ತ್ರ ಸುದ್ದಿ
ಬೆಂಗಳೂರು(Bengaloru): ಆನ್ಲೈನ್ ಬೆಟ್ಟಿಂಗ್ ಆಪ್ ಮೂಲಕ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಖ್ಯಾತ ನಟ, ನಟಿಯರು ಸೇರಿದಂತೆ 29 ಜನರ ವಿರುದ್ಧ ಇಡಿ ಪ್ರಕರಣ ದಾಖಲಿಸಿದೆ. ತೆಲುಗು ನಟರಾದ ರಾಣಾ ದಗ್ಗುಬಾಟಿ, ವಿಜಯ್ ದೇವರಕೊಂಡ, ಬಹುಭಾಷಾ ನಟ ಪ್ರಕಾಶ್ ರೈ, ಕನ್ನಡದ ನಟಿ ಪ್ರಣೀತಾ ಸುಭಾಷ್, ತೆಲುಗು ನಟಿ ಮಂಚು ಲಕ್ಷ್ಮಿ, ಟಿವಿ ನಿರೂಪಕಿ ಶ್ರೀಮುಖಿ, ನಟಿಯರಾದ ನಿಧಿ ಅಗರ್ ವಾಲ್, ನಯನಿ ಪಾವನಿ,ಅನನ್ಯಾ ನಾಗಲ್ಲಾ, ಶ್ಯಾಮಲಾ ಸೇರಿ ಅನೇಕರ ವಿರುದ್ಧ ಪ್ರಕರಣ ದಾಖಲಾಗಿದೆ.
ನೇಹಾ ಪರಣ್, ವಾಸಂತಿ ಕೃಷ್ಣನ್, ಸಿರಿ ಹನುಮಂತು, ವರ್ಷಣಿ ಸೌಂದರರಾಜನ್, ಅಮೃತಾ ಚೌಧರಿ, ಶೋಭಾ ಶೆಟ್ಟಿ, ವರ್ಷಿಣಿ, ನಟರಾದ ವಿಷ್ಣುಪ್ರಿಯ, ಹರ್ಷಸಾಯಿ, ಟೇಸ್ಟ್ ತೇಜಾ, ಇಮ್ರಾನ್ ಖಾನ್, ಭಯ್ಯಾ ಸುನ್ನಿ ಯಾದವ್ ಸೇರಿ ಇನ್ ಫ್ಲುಯನ್ಸರ್, ಯುಟ್ಯೂಬರ್ ಸೇರಿದಂತೆ ಸೆಲೆಬ್ರೆಟಿಗಳು ಇಡಿ ಪಟ್ಟಿಯಲ್ಲಿದ್ದಾರೆ. ಐದು ರಾಜ್ಯಗಳ ಪೊಲೀಸರ ವರದಿ ಆಧರಿಸಿ ಇಡಿ ಪ್ರಕರಣ ದಾಖಲಿಸಿಕೊಂಡಿದೆ. ಆರೋಪಿಗಳು ಆನ್ಲೈನ್ ಬೆಟ್ಟಿಂಗ್ ಆಪ್ ಸೇರಿದಂತೆ ಜೂಜುಗಳ ಪ್ರಚಾರದ ಮೂಲಕ ಅಕ್ರಮವಾಗಿ ಹಣ ಸಂಗ್ರಹಿಸಿದ ಆರೋಪವಿದೆ.