Ad imageAd image

ಆನ್ಲೈನ್ ಗೇಮ್ ಚಟದಿಂದ ಸಾಲ, ಎಂಬಿಬಿಎಸ್ ವಿದ್ಯಾರ್ಥಿ ಆತ್ಮಹತ್ಯೆ

Nagesh Talawar
ಆನ್ಲೈನ್ ಗೇಮ್ ಚಟದಿಂದ ಸಾಲ, ಎಂಬಿಬಿಎಸ್ ವಿದ್ಯಾರ್ಥಿ ಆತ್ಮಹತ್ಯೆ
WhatsApp Group Join Now
Telegram Group Join Now

ಪ್ರಜಾಸ್ತ್ರ ಸುದ್ದಿ

ಬೀದರ(Bidara): ಆನ್ಲೈನ್ ಗೇಮ್ ಚಟದಿಂದಾಗಿ ಸಾಲ ಮಾಡಿಕೊಂಡಿದ್ದ ಎಂಬಿಬಿಎಸ್ ಅಂತಿಮ ವರ್ಷದ ವಿದ್ಯಾರ್ಥಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಇಲ್ಲಿನ ಬೀದರ ವೈದ್ಯಕೀಯ ವಿಜ್ಞಾನ ಸಂಸ್ಥೆಯ ವಸತಿ ನಿಲಯದಲ್ಲಿ ನಡೆದಿದೆ. ಅನಿಷ್ಕಾರ್ ಚವಾಣ್(21) ಅನ್ನೋ ವಿದ್ಯಾರ್ಥಿ ಸೋಮವಾರ ತಡರಾತ್ರಿ ವಸತಿ ನಿಲಯದ ಕೊಠಡಿಯಲ್ಲಿನ ಫ್ಯಾನ್ ಗೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಕಲಬುರಗಿ ಜಿಲ್ಲೆ ಚಿಂಚೋಳಿ ತಾಲೂಕಿನ ಬಾಲತ್ಯಾ ತಾಂಡಾ ನಿವಾಸಿಯಾಗಿದ್ದ ಅನಿಷ್ಕಾರ್, ಆನ್ಲೈನ್ ಗೇಮ್ ಆಟಕ್ಕೆ ದಾಸನಾಗಿದ್ದ. ಆಟದಲ್ಲಿ 80 ಸಾವಿರ ರೂಪಾಯಿ ಕಳೆದುಕೊಂಡಿದ್ದ. ಇದಕ್ಕೂ ಮೊದಲು ಸಹ ಸೋತಿದ್ದ. ಘಟನೆಯ ಬಗ್ಗೆ ಮಾಹಿತಿ ತಿಳಿದು ಎಸ್ಪಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ನ್ಯೂ ಟೌನ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಮೃತನ ಅಣ್ಣ ಸಹ ಬ್ರಿಮ್ಸ್ ನಲ್ಲಿ ಎಂಬಿಬಿಎಸ್ ಓದುತ್ತಿದ್ದಾರೆ. ಸಹೋದರಿ ಸಹ ಇಲ್ಲಿಯೇ ಎಂಬಿಬಿಎಸ್ ಮುಗಿಸಿ ಬೆಂಗಳೂರಲ್ಲಿ ಎಂಡಿ ಮಾಡುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.

WhatsApp Group Join Now
Telegram Group Join Now
Share This Article