ಪ್ರಜಾಸ್ತ್ರ ಸುದ್ದಿ
ಬೆಂಗಳೂರು(Bengaloru): ಮುಖ್ಯಮಂತ್ರಿ ಸಿದ್ದರಾಮಯ್ಯನವರ(Siddaramaiah) ವಿರುದ್ಧ ಮುಡಾ ಆರೋಪ ಸಂಬಂಧ ರಾಜ್ಯಪಾಲರು ಪ್ರಾಸಿಕ್ಯೂಷನ್ ಗೆ ಅನುಮತಿ ನೀಡಿದ್ದಾರೆ. ಆದರೆ, ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ ಸೇರಿ ಬಿಜೆಪಿ(BJP) ಅನೇಕರ ವಿರುದ್ಧ ಗಂಭೀರ ಪ್ರಕರಣಗಳಿವೆ. ಅವರಿಗೆ ಪ್ರಾಸಿಕ್ಯೂಷನ್ ಅನುಮತಿ ನೀಡದೆ ಇರುವುದನ್ನು ರಾಜ್ಯ ಕಾಂಗ್ರೆಸ್ ಖಂಡಿಸಿದೆ. ನನ್ನನ್ನು ಬಂಧಿಸಲು ನೂರು ಸಿದ್ದರಾಮಯ್ಯನವರಿಂದಲೂ ಸಾಧ್ಯವಿಲ್ಲವೆಂದು ಕುಮಾರಸ್ವಾಮಿ ಹೇಳಿರುವುದಕ್ಕೆ ಕಾಂಗ್ರೆಸ್ ತಿರುಗೇಟು ನೀಡಿದೆ.
ನಿಮ್ಮನ್ನು ಬಂಧಿಸಲು ನೂರು ಸಿದ್ದರಾಮಯ್ಯನವರು ಬೇಕಿಲ್ಲ. ಒಬ್ಬ ಸಿದ್ದರಾಮಯ್ಯನವರೂ ಬೇಕಿಲ್ಲ. ಕುಮಾರಸ್ವಾಮಿಯವರು(HDK) ಕರ್ನಾಟಕದ ಪೊಲೀಸರ(Police) ಸಾಮರ್ಥ್ಯಕ್ಕೆ ಸವಾಲು ಹಾಕುತ್ತಿದ್ದಾರಾ ಅಥವ ಕಾನೂನನ್ನು ಪ್ರಶ್ನೆ ಮಾಡುತ್ತಿದ್ದಾರಾ ಎಂದು ಸಾಮಾಜಿಕ ಜಾಲತಾಣದಲ್ಲಿ ಕಾಂಗ್ರೆಸ್ ಕಿಡಿ ಕಾರಿದೆ. ಗಣಿ ಹಗರಣದಲ್ಲಿ 550 ಎಕರೆ ಭೂಮಿ ಭಗೆಯಲು ನಿಯಮಗಳನ್ನು ಗಾಳಿಗೆ ತೂರಿದ ಕುಮಾರಸ್ವಾಮಿಯವರನ್ನು ಅಗತ್ಯಬಿದ್ದರೆ ಬಂಧಿಸಲೇಬೇಕಾದ ಸನ್ನಿವೇಶ ಸೃಷ್ಟಿಯಾದರೆ ಬಂಧಿಸಲು ನಮ್ಮ ಸರ್ಕಾರ ಹಿಂದೇಟು ಹಾಕುವುದಿಲ್ಲ. ಮೈ ತುಂಬಾ ಭ್ರಷ್ಟಾಚಾರದ ಕೊಳೆಯನ್ನು ತುಂಬಿಕೊಂಡಿರುವ ಕುಮಾರಸ್ವಾಮಯವರು ಸಾರ್ವಜನಿಕ ಜೀವನದಲ್ಲಿರಬೇಕಾದ ವ್ಯಕ್ತಿಯಲ್ಲ. ಜೈಲಿನಲ್ಲಿ ಇರಬೇಕಾದ ವ್ಯಕ್ತಿ ಎಂದು ತೀವ್ರ ವಾಗ್ದಾಳಿ ನಡೆಸಲಾಗಿದೆ.