ಪ್ರಜಾಸ್ತ್ರ ಸುದ್ದಿ
ಸಿಂದಗಿ(Sindagi): ತಾಲೂಕು ಆಡಳಿತ ಕಚೇರಿಯಲ್ಲಿ ಸಮಾಜ ಕಲ್ಯಾಣ ಇಲಾಖೆ ಇವರ ಸಂಯುಕ್ತ ಆಶ್ರಯದಲ್ಲಿ ಮಹರ್ಷಿ ವಾಲ್ಮೀಕಿ ಜಯಂತಿ ಆಚರಿಸಲಾಯಿತು. ಪುರಸಭೆ ಅಧ್ಯಕ್ಷ ಶಾಂತವೀರ ಬಿರಾದಾರ ಅವರು ಸೇರಿದಂತೆ ಇತರರು ಫೋಟೋ ಪೂಜೆ ನೆರವೇರಿಸುವ ಮೂಲಕ ಗೌರವ ಸಲ್ಲಿಸಿದರು. ಈ ವೇಳೆ ಶಾಂತವೀರ ಬಿರಾದರ, ತಹಶೀಲ್ದಾರ್ ಪ್ರದೀಪಕುಮಾರ್ ಹಿರೇಮಠ ಸೇರಿ ಇತರರು ಮಾತನಾಡಿದರು.
ಉಪನ್ಯಾಸಕ ಶ್ರೀಧರ ಅವಟಿ ವಿಶೇಷ ಉಪನ್ಯಾಸ ನೀಡಿದರು. ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕಿ ಭವಾನಿ ಪಾಟೀಲ ಸ್ವಾಗತಿಸಿದರು. ತಾಲೂಕು ಪಂಚಾಯ್ತಿ ಇಒ ರಾಮು ಜಿ.ಅಗ್ನಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಬಿಇಒ ಎನ್.ಬಿ ಯಡ್ರಾಮಿ, ವಾಲ್ಮೀಕಿ ನಾಯಕ ಮಹಸಭಾ ಅಧ್ಯಕ್ಷ ಸಿದ್ಧಲಿಂಗ ಬಸಪ್ಪ ನಾಯ್ಕೋಡಿ, ಪುರಸಭೆ ಉಪಾಧ್ಯಕ್ಷ ರಾಜಣ್ಣ ನಾರಾಯಣಕರ, ನಿಂಬೆ ಅಭಿವೃದ್ಧಿ ಮಂಡಳಿ ಮಾಜಿ ಅಧ್ಯಕ್ಷ ಅಶೋಕ ಅಲ್ಲಾಪೂರ ವೇದಿಕೆ ಮೇಲಿದ್ದರು.
ಆಮಂತ್ರಣ ಪತ್ರಿಕೆಯಲ್ಲಿ ನಿಯಮಾನುಸಾರ ಹೆಸರು ಹಾಕಿದವರ ಜೊತೆಗೆ ಬೇರೆಯವರಿಗೂ ವೇದಿಕೆ ಮೇಲೆ ಅವಕಾಶ ಕೊಟ್ಟಂತೆ ದಲಿತಪರ ಸಂಘಟನೆಯ ಮುಖಂಡರಿಗೂ ಅವಕಾಶ ಕೊಡಿ ಎಂದು ಕೆಲವರು ಅಸಮಾಧಾನ ವ್ಯಕ್ತಪಡಿಸಿದರು. ವೇದಿಕೆ ಏರಿ ತಹಶೀಲ್ದಾರ್ ಪ್ರದೀಪಕುಮಾರ ಹಿರೇಮಠ ಅವರನ್ನು ಪ್ರಶ್ನಿಸುತ್ತಿದ್ದರು, ಇದರಿಂದಾಗಿ ಸ್ವಲ್ಪ ಆತಂಕ ಮೂಡಿತು. ಕೂಡಲೇ ಇತರರು ಅವರನ್ನು ಸಮಾಧಾನಪಡಿಸಿ ಪರಿಸ್ಥಿತಿ ತಿಳಿಗೊಳಿಸಿದರು.
ಕಾರ್ಯಕ್ರಮದಲ್ಲಿ ಕಸಾಪ ಮಾಜಿ ಅಧ್ಯಕ್ಷ ಚಂದ್ರಶೇಖರ ದೇವರೆಡ್ಡಿ, ಡಿಎಸ್ಎಸ್ ಜಿಲ್ಲಾ ಸಂಚಾಲಕ ವೈ.ಸಿ ಮಯೂರ, ಪುರಸಭೆ ಸದಸ್ಯರಾದ ಶರಣಗೌಡ ಪಾಟೀಲ, ಬಸವರಾಜ ಯರನಾಳ, ಹಾಸೀಂಪೀರ ಆಳಂದ, ಸಂದೀಪ ಚೌರ, ಬಿಜೆಪಿ ಮುಖಂಡ ಪೀರು ಕೆರೂರ, ಕಾಂಗ್ರೆಸ್ ಮಹಿಳಾ ಮುಖಂಡರಾದ ಸುನಂದಾ ಯಂಪೂರೆ, ಚಳ್ಳಗಿ, ಅಂಬಿಕಾ ಪಾಟೀಲ, ಶರಣಮ್ಮ ನಾಯಕ ಸೇರಿದಂತೆ ವಿವಿಧ ಸಮಾಜದ, ಸಂಘಟನೆಗಳ ಮುಖಂಡರು ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿ ಹಾಜರಿದ್ದರು.