ಪ್ರಜಾಸ್ತ್ರ ಸುದ್ದಿ
ನವದೆಹಲಿ(New Delhi): ಖ್ಯಾತ ಜಾನಪದ ಗಾಯಕಿ, ಪದ್ಮಭೂಷಣ ಪ್ರಶಸ್ತಿ ಪುರಸ್ಕೃತ ಶಾರದಾ(Sharda Sinha) ಸಿನ್ಹಾ(72) ಅವರು ಮಂಗಳವಾರ ರಾತ್ರಿ ನಿಧನರಾಗಿದ್ದಾರೆ. ಕ್ಯಾನ್ಸರ್, ಮಯೋಮಿಯಾ ಸಮಸ್ಯೆಯಿಂದಾಗಿ ದೆಹಲಿಯ ಏಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಚಿಕಿತ್ಸೆ ಫಲಿಸದೆ ನಿಧನರಾಗಿದ್ದಾರೆ. ಇವರ ನಿಧನಕ್ಕೆ ಪ್ರಧಾನಿ ಮೋದಿ ಸೇರಿದಂತೆ ಗಣ್ಯರು, ಚಿತ್ರರಂಗದ ತಾರೆಯರು, ಗಾಯಕರು ಸಂತಾಪ ಸೂಚಿಸಿದ್ದಾರೆ.
ಗಾಯಕಿ ಶಾರದಾ ಸಿನ್ಹಾ ಅವರು ಮೈಥಲಿ, ಭೋಜಪುರಿ ಜಾನಪದ ಗೀತೆಗಳನ್ನು(Folk Singer) ಹಾಡುತ್ತಿದ್ದರು. ಬಿಹಾರಿ ಕೋಕಿಲಾ ಎಂದೇ ಖ್ಯಾತಿ ಪಡೆದಿದ್ದರು. ಹಮ್ ಆಪ್ಕೆ ಹೈ ಕೌನ್, ತಾರ್ ಬಿಜಿಲಿ, ಗ್ಯಾಂಗ್ಸ್ ಆಫ್ ವಸೇಪುರ್ ಸೇರಿ ಅನೇಕ ಹಿಂದಿ ಸಿನಿಮಾಗಳಲ್ಲಿ ಹಾಡಿದ್ದಾರೆ. ಹಲವು ಸಿನಿಮಾಗಳಲ್ಲಿ ನಟನೆ ಸಹ ಮಾಡಿದ್ದಾರೆ. ಇವರ ನಿಧನಕ್ಕೆ ಸಂಗೀತ ಕ್ಷೇತ್ರದ ಗಣ್ಯರು ಸೇರಿ ಆಪ್ತರು, ಬಂಧು ಮಿತ್ರರು ಸಂತಾಪ ಸೂಚಿಸಿದ್ದಾರೆ.