ಪ್ರಜಾಸ್ತ್ರ ಸುದ್ದಿ
ನವದೆಹಲಿ(New Delhi): ಭಾರತ ಸರ್ಕಾರ ನೀಡುವ ಅತ್ಯುನ್ನತ ನಾಗರಿಕ ಪ್ರಶಸ್ತಿಗಳಾದ ಪದ್ಮಶ್ರೀ, ಪದ್ಮಭೂಷಣ ಹಾಗೂ ಪದ್ಮವಿಭೂಷಣ ಪ್ರಶಸ್ತಿಯನ್ನು ಪ್ರಕಟಿಸಲಾಗಿದೆ. 2026ನೇ ಸಾಲಿನ ಪ್ರಶಸ್ತಿಗೆ ಕರ್ನಾಟಕದ ನಾಲ್ವರು ಸೇರಿದಂತೆ 131 ಸಾಧಕರಿಗೆ ಈ ಪ್ರಶಸ್ತಿ ಲಭಿಸಿದೆ. ಕೇಂದ್ರ ಗೃಹ ಸಚಿವಾಲಯ ಭಾನುವಾರ ಪ್ರಶಸ್ತಿ ಪ್ರಟಿಸಿದೆ.
ಕರ್ನಾಟಕದ ಶತವಧಾನಿ ಆರ್.ಗಣೇಶ್ ಅವರಿಗೆ ಪದ್ಮಭೂಷಣ, ಎಸ್.ಜಿ ಸುಶೀಲಮ್ಮ, ಸುರೇಶ ಹಗನವಾಡಿ, ಎಂ.ಅಂಕೇಗೌಡ ಅವರಿಗೆ ಪದ್ಮಶ್ರೀ ಪ್ರಶಸ್ತಿ ಒಲಿದಿದೆ. ಗಣರಾಜ್ಯೋತ್ಸವ ಹಿಂದಿನ ದಿನ ಈ ಪ್ರಶಸ್ತಿಯ ಪಟ್ಟಿಯನ್ನು ಘೋಷಿಸಲಾಗಿದೆ.




