ಪ್ರಜಾಸ್ತ್ರ ಸುದ್ದಿ
ನವದೆಹಲಿ(New Delhi): ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ರೋಹಿತ್ ಶರ್ಮಾ ಹಾಗೂ ಮಹಿಳಾ ಕ್ರಿಕೆಟ್ ತಂಡದ ನಾಯಕಿ ಹರ್ಮನ್ ಪ್ರೀತ್ ಕೌರ್ ಅವರಿಗೆ 2026ನೇ ಸಾಲಿನ ಪದ್ಮಶ್ರೀ ಪ್ರಶಸ್ತಿ ಲಭಿಸಿದೆ. ಏಕದಿನ ವಿಶ್ವಕಪ್ ಹಾಗೂ ಟಿ-20 ವಿಶ್ವಕಪ್ ಗೆಲ್ಲಿಸಿಕೊಟ್ಟ ರೋಹಿತ್ ಶರ್ಮಾ ಹಾಗೂ ಮಹಿಳಾ ಕ್ರಿಕೆಟ್ ತಂಡ ಸಹ ಕೌರ್ ನಾಯಕತ್ವದಲ್ಲಿ ವಿಶ್ವಕಪ್ ಗೆಲುವು ಸಾಧಿಸಿದೆ.
ಮಾಜಿ ಟೆನಿಸ್ ಆಟಗಾರ ವಿಜಯ್ ಅಮೃತ್ ರಾಜ್ ಅವರಿಗೆ ಪದ್ಮಭೂಷಣ, ಕ್ರೀಡಾಪಟುಗಳಾದ ಬಲದೇವ ಸಿಂಗ್, ಭಗವನ್ ದಾಸ್ ರಾಯ್ಕ್ವರ್, ಕೆ.ಪಜನಿವೆಲ್, ಪ್ರವೀಣ ಕುಮಾರ್, ಸವಿತಾ ಪುನಿಯಾ, ವಾಡ್ಲಿಮರ್ ಮೆಸ್ಟ್ವಿ ರಿಶ್ವಲಿ ಅವರಿಗೆ ಪದ್ಮಶ್ರೀ ಒಲಿದು ಬಂದಿದೆ. ಐವರಿಗೆ ಪದ್ಮಭೂಷಣ, 13 ಪದ್ಮಭೂಷಣ, 113 ಸಾಧಕರಿಗೆ ಪದ್ಮಶ್ರೀ ಪ್ರಶಸ್ತಿ ಘೋಷಿಸಲಾಗಿದೆ.




