ಪ್ರಜಾಸ್ತ್ರ ಸುದ್ದಿ
ಭಾನುವಾರ ಮುಕ್ತಾಯಗೊಂಡ ಐಸಿಸಿ ಚಾಂಪಿಯನ್ಸ್ ಟ್ರೋಫಿ ಫೈನಲ್ ಪಂದ್ಯದಲ್ಲಿ ನ್ಯೂಜಿಲೆಂಡ್ ವಿರುದ್ಧ ಭಾರತ ಭರ್ಜರಿ ಗೆಲುವು ದಾಖಲಿಸಿ 3ನೇ ಬಾರಿಗೆ ಚಾಂಪಿಯನ್ಸ್ ಎನಿಸಿಕೊಂಡಿದೆ. ಈ ವೇಳೆ ಪ್ರಶಸ್ತಿ ಪ್ರದಾನದ ಸಂದರ್ಭದಲ್ಲಿ ಪಾಕ್ ಪ್ರತಿನಿಧಿಯನ್ನು ವೇದಿಕೆ ಮೇಲೆ ಕರೆದಿಲ್ಲ ಪಾಕಿಸ್ತಾನ ಕ್ರಿಕೆಟ್ ಬೋರ್ಡ್ ಆಕ್ರೋಶ ವ್ಯಕ್ತಪಡಿಸಿದೆ. ಈ ಟೂರ್ನಿಯನ್ನು ಪಾಕಿಸ್ತಾನ ಆಯೋಜನೆ ಮಾಡಿತ್ತು.
1996ರ ವಿಶ್ವಕಪ್ ಬಳಿಕ ಪಾಕ್ ಐಸಿಸಿ ಚಾಂಪಿಯನ್ಸ್ ಟ್ರೋಫಿ ಆಯೋಜಿಸಿತ್ತು. ಭದ್ರತೆ ದೃಷ್ಟಿಯಿಂದ ಟೀಂ ಇಂಡಿಯಾ ಪಾಕ್ ನೆಲದಲ್ಲಿ ಪಂದ್ಯಗಳನ್ನು ಆಡಿಲ್ಲ. ಹೀಗಾಗಿ ಭಾರತದ ಪಂದ್ಯಗಳು ದುಬೈನಲ್ಲಿ ನಡೆದವು. ಟ್ರೋಫಿ ಹಾಗೂ ಜಾಕೇಟು ನೀಡುವ ವೇಳೆ ಐಸಿಸಿ ಅಧ್ಯಕ್ಷ ಜಯ್ ಶಾ, ಬಿಸಿಸಿಐ ಅಧ್ಯಕ್ಷ ರೋಜರ್ ಬಿನ್ನಿ, ಕಾರ್ಯದರ್ಶಿ ದೇವಜಿತ್ ಸೈಕಿಯಾ ಇದ್ದರು. ಆದರೆ, ಟೂರ್ನಿ ಆಯೋಜಿಸಿದ್ದ ಪಾಕ್ ಪ್ರತಿನಿಧಿಯಾಗಿ ಭಾಗವಹಿಸಿದ್ದ ಪಿಸಿಬಿ ಸಿಇಒ ಸುಮೈರ್ ಅಹ್ಮದ್ ಅವರನ್ನು ವೇದಿಕೆಗೆ ಕರೆದಿಲ್ಲ. ಇದನ್ನು ಪ್ರಶ್ನಿಸಲು ಪಿಸಿಬಿ ಮುಂದಾಗಿದೆ. ಇನ್ನು ಟೂರ್ನಿ ಆಯೋಜನೆ ಮಾಡಿದ ತಂಡವೇ ವಿದೇಶದಲ್ಲಿ ಪಂದ್ಯ ಆಡಿದ್ದು ಇದೆ ಮೊದಲು. ಭಾರತದ ವಿರುದ್ಧ ಪಾಕ್ ದುಬೈನಲ್ಲಿ ಪಂದ್ಯವಾಡಿತು.