Ad imageAd image

‘ರಸ್ತೆಯಲ್ಲಿ ಸಮಯ ಕಳೆದು, ಪಾತ್ರೆ ತೊಳೆದ ಪಾಕ್ ಹಾಕಿ ಕ್ರೀಡಾಪಟುಗಳು’

Nagesh Talawar
‘ರಸ್ತೆಯಲ್ಲಿ ಸಮಯ ಕಳೆದು, ಪಾತ್ರೆ ತೊಳೆದ ಪಾಕ್ ಹಾಕಿ ಕ್ರೀಡಾಪಟುಗಳು’
WhatsApp Group Join Now
Telegram Group Join Now

ಪ್ರಜಾಸ್ತ್ರ ಸುದ್ದಿ

ಲಾಹೋರ್(Lahor): ಪಾಕಿಸ್ತಾನದ ಹಾಕಿ ಕ್ರೀಡಾಪಟುಗಳು ಎಫ್ಐಎಚ್ ಪ್ರೋ ಲೀಗ್ ಪಂದ್ಯಗಳನ್ನು ಆಡಲು ಆಸ್ಟ್ರೇಲಿಯಾ ಪ್ರವಾಸ ಕೈಗೊಂಡಿದ್ದರು. ಆದರೆ, ಅವರಿಗೆ ಪಾಕಿಸ್ತಾನ ಹಾಕಿ ಫಡರೇಷನ್ ಸರಿಯಾದ ವ್ಯವಸ್ಥೆ ಮಾಡದೆ ಇರುವ ಕಾರಣ ಬೀದಿಯಲ್ಲಿ ಸಮಯ ಕಳೆದಿದ್ದಾರಂತೆ. ಪಂದ್ಯಕ್ಕೂ ಮುನ್ನ ಪಾತ್ರೆ ತೊಳೆದು ಹೋಗಿದ್ದೇವೆ ಎಂದು ಹಾಕಿ ತಂಡದ ನಾಯಕ ಶಕೀಲ್ ಅಹ್ಮದ್ ಭಟ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

13 ದಿನಗಳ ಪ್ರವಾಸ ಮುಗಿಸಿಕೊಂಡು ವಾಪಸ್ ಬಂದಿರುವ ತಂಡ ಮಾಧ್ಯಮಗಳ ಎದುರು ತಮ್ಮ ಪರದಾಟವನ್ನು ಹಂಚಿಕೊಂಡಿದೆ. ಪಾಕಿಸ್ತಾನ ಹಾಕಿ ಫೆಡರೇಷನ್ ಸಾಕಷ್ಟು ಸುಳ್ಳುಗಳನ್ನು ಹೇಳಿದೆ. ಕ್ಯಾನ್ ಬೆರಾಗೆ ಪ್ರಾಣಿಸುವ ಮುನ್ನ ಸಿಡ್ನಿಯಲ್ಲಿ 13-14 ಗಂಟೆಗಳ ಕಾಲ ವಿಮಾನ ನಿಲ್ದಾಣಗಳಲ್ಲಿ ಕಾಯಕಬೇಕಾಯಿತು. ಹೋಟೆಲ್ ಗೆ ಮುಂಗಡ ಹಣ ಪಾವತಿಸದ ಕಾರಣ ಬುಕ್ಕಿಂಗ್ ರದ್ದು ಮಾಡಿದ್ದರು. ಹೀಗಾಗಿ ರಸ್ತೆಯಲ್ಲಿ ಸಮಯ ಕಳೆಯಬೇಕಾಯಿತು. 13 ದಿನ ಪ್ರವಾಸ 10 ದಿನಕ್ಕಷ್ಟೆ ವ್ಯವಸ್ಥೆ. ಬಳಿಕ ಅಗ್ಗದ ಹೋಟೆಲ್ ನಲ್ಲಿ ಉಳಿದುಕೊಳ್ಳಬೇಕಾಯಿತು ಎಂದು ಶಕೀಲ್ ಹೇಳಿದ್ದಾರೆ. ಪಾಕಿಸ್ತಾನ ಆಡಿದ ನಾಲ್ಕೂ ಪಂದ್ಯಗಳಲ್ಲಿ ಸೋಲು ಅನುಭವಿಸಿದೆ. ಈ ಸಂಬಂಧ ತನಿಖೆ ನಡೆಸುವಂತೆ ಇದೀಗ ಪ್ರಧಾನಿ ಶೆಹಬಾಜ್ ಷರೀಫ್ ಸೂಚನೆ ನೀಡಿದ್ದಾರೆ.

WhatsApp Group Join Now
Telegram Group Join Now
Share This Article