ಪ್ರಜಾಸ್ತ್ರ ಸುದ್ದಿ
ಇಸ್ಲಾಮಾಬಾದ್(islamabad): ಟ್ರೇನ್ ಹೈಜಾislamabad ಕ್(Train Hijack) ಮಾಡಿ ನೂರಾರು ಪ್ರಯಾಣಿಕರನ್ನು ಉಗ್ರರು ಒತ್ತೆಯಾಳಾಗಿ ಇಟ್ಟುಕೊಂಡು ಪ್ರಕರಣದಲ್ಲಿ ಪಾಕ್ ಭದ್ರತಾ ಪಡೆ 27 ಉಗ್ರರನ್ನು ಹತ್ಯೆ ಮಾಡಿದೆ. 155 ಪ್ರಯಾಣಿಕರನ್ನು ರಕ್ಷಣೆ ಮಾಡಿದೆ. ಈ ವೇಳೆ 37 ಪ್ರಯಾಣಿಕರು ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಬಲೂಚಿಸ್ತಾನ ಪ್ರಾಂತ್ಯದಲ್ಲಿ ರೈಲಿನ ಮೇಳೆ ಗುಂಡಿನ ದಾಳಿ ನಡೆಸಿ ಅದನ್ನು ಹೈಜಾಕ್ ಮಾಡಿದ್ದಾರೆ.
ಮಂಗಳವಾರ ಮಧ್ಯಾಹ್ನ ಕ್ವೆಟ್ಟಾದಿಂದ ಪೆಶಾವರಕ್ಕೆ ತೆರಳುತ್ತಿದ್ದ ಒಂಬತ್ತು ಬೋಗಿಗಳ ಜಾಫರ್ ಎಕ್ಸ್ ಪ್ರೆಸ್ ರೈಲಿನಲ್ಲಿ ಸುಮಾರು 400 ಪ್ರಯಾಣಿಸುತ್ತಿದ್ದರು. ಗಡಾಲರ್ ಹಾಗೂ ಪೆಹ್ರೂ ಕುನ್ರಿ ಕಣಿವೆ ಪ್ರದೇಶದ ಹತ್ತಿರದ ಸುರಂಗದಲ್ಲಿ ಬಂದೂಕುಧಾರಿ ಉಗ್ರರು ಗುಂಡಿನ ದಾಳಿ ನಡೆಸಿದ್ದರು. ಬಲಚೂಸ್ತಾನ ಲಿಬರೇಷನ್ ಆರ್ಮಿ ಇದರ ಹೊಣೆಯನ್ನು ಹೊತ್ತಿದೆ.