ಪ್ರಜಾಸ್ತ್ರ ಸುದ್ದಿ
ಕಾಬೂಲ್: ಪಾಕಿಸ್ತಾನ ಹಾಗೂ ಅಫ್ಗಾನಿಸ್ತಾನ ನಡುವಿನ ಸಂರ್ಘದಲ್ಲಿ ಇದೀಗ ಮೂವರು ಯುವ ಕ್ರಿಕೆಟಿಗರು ಹಾಗೂ ಐವರು ನಾಗರಿಕರು ಮೃತಪಟ್ಟಿದ್ದಾರೆ. ಪಾಕ ನಡೆಸಿದ ವೈಮಾನಿಕ ದಾಳಿಯಲ್ಲಿ ಪಕ್ತಿಕಾ ಪ್ರಾಂತ್ಯದ ಉರ್ಗುನ್ ಜಿಲ್ಲೆಯಲ್ಲಿ ಮೂವರು ಯುವ ಕ್ರಿಕೆಟಿಗರು ಮೃತಪಟ್ಟಿದ್ದಾರೆ. ಇದನ್ನು ಖಂಡಿಸಿರುವ ಅಫ್ಗನ್ ಕ್ರಿಕೆಟ್ ಮಂಡಳಿ, ಪಾಕಿಸ್ತಾನ, ಶ್ರೀಲಂಕ ನಡುವಿನ ತ್ರಿಕೋನ ಟಿ-20 ಸರಣಿಯಿಂದ ಹಿಂದೆ ಸರಿದಿದೆ. ತನ್ನ ಎಕ್ಸ್ ಖಾತೆಯಲ್ಲಿ ಮೃತಪಟ್ಟವರಿಗೆ ಸಂತಾಪ ಸೂಚಿಸಿ ಈ ಪ್ರಕರಟಣೆ ಹೊರಡಿಸಿದೆ.
ನವೆಂಬರ್ 17ರಿಂದ 29ರ ತನಕ ನಡೆಯವರಗೆ ಲಾಹೋರ್ ಹಾಗೂ ರಾವಲ್ಪಿಂಡಿಯಲ್ಲಿ ತ್ರಿಕೋನ ಟಿ-20 ಟೂರ್ನಿ ಆಯೋಜಿಸಿದೆ. ಪಾಕಿಸ್ತಾನದ ಕೃತ್ಯದಿಂದ ಅಫ್ಗನ್ ಈ ಟೂರ್ನಿಯಿಂದ ಹಿಂದೆ ಸರಿಯಲು ನಿರ್ಧರಿಸಿದೆ. ಪಾಕಿಸ್ತಾನ ನಡೆಸಿರುವ ಹೇಡಿತನದ ದಾಳಿಯಿಂದ ಪಕ್ತಿಕಾ ಪ್ರಾಂತ್ಯದ ಉರ್ಗುನ್ ಜಿಲ್ಲೆಯಲ್ಲಿ ನಮ್ಮ ಮೂವರು ಧೈರ್ಯಶಾಲಿ ಕ್ರಿಕೆಟಿಗರು ಹಾಗೂ ಐವರು ನಾಗರಿಕರು ಮೃತಪಟ್ಟಿದ್ದು, ಅವರ ನಿಧನಕ್ಕೆ ಅಫ್ಗನ್ ಕ್ರಿಕೆಟ್ ಮಂಡಳಿ ತೀವ್ರ ಸಂತಾಪ ವ್ಯಕ್ತಪಡಿಸುತ್ತದೆ ಎಂದು ಪ್ರಕಟಣೆ ಹೊರಡಿಸಿದೆ.