ಪ್ರಜಾಸ್ತ್ರ ಸುದ್ದಿ
ಕರಾಚಿ(Karachi): ಪಾಕಿಸ್ಥಾನದ ಖೈಬರ್ ಪಖ್ತುಂಖ್ವಾ ಪ್ರದೇಶದಲ್ಲಿ ಶಿಯಾ ಹಾಗೂ ಸುನ್ನಿ ಸಮುದಾಯಗಳ ನಡುವೆ ಸಂಘರ್ಷ ನಡೆಯುತ್ತಿದೆ. ಕಳೆದ 10 ದಿನಗಳಿಂದ ನಡೆಯುತ್ತಿರುವ ಹಿಂಸಾಚಾರದಲ್ಲಿ(Violence) ಇದುವರೆಗೂ 124 ಜನರು ಮೃತಪಟ್ಟಿದ್ದು, 170ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ ಎಂದು ತಿಳಿದು ಬಂದಿದೆ.
ಪ್ರಯಾಣಿಕರ ವ್ಯಾನ್ ಮೇಲೆ ಪರಾಚಿನರ್ ಹತ್ತಿರ ನವೆಂಬರ್ 22ರಂದು ನಡೆದ ದಾಳಿಯ ಬಳಿಕ ಹಿಂಸಾಚಾರ ಶುರುವಾಗಿದೆ. ಖರ್, ಕಾಲಿ, ಮಕ್ಬಲ್, ಬಲಿಶ್ ಖೇಲ್, ಜುಂಜ್ ಅಲಿಜೈ ಸೇರಿ ಅನೇಕ ಪ್ರದೇಶಗಳಿಗೂ ಹಿಂಸಾಚಾರ ವ್ಯಾಪಿಸಿದೆ. ಈ ಭಾಗದಲ್ಲಿ 37 ಜನರು ಪ್ರಾಣ ಕಳೆದುಕೊಂಡಿದ್ದಾರೆ. ಶಿಯಾ, ಸುನ್ನಿ ಸಮುದಾಯಗಳ ಜೊತೆಗೆ ಮಾತುಕತೆ ನಡೆಸಿರುವ ಸರ್ಕಾರ 7 ದಿನಗಳ ಯುದ್ಧ ವಿರಾಮವನ್ನು 19 ದಿನಗಳವರೆಗೆ ವಿಸ್ತರಿಸಿದೆ.