ಪ್ರಜಾಸ್ತ್ರ ಸುದ್ದಿ
ಬೆಂಗಳೂರು(Bengaloru): ಹಣ್ಮಕ್ಕಳ ಮಾತನ್ನ ನಂಬಿ ಮೋಸ ಹೋಗುವವರ ಸಂಖ್ಯೆ ಏನೂ ಕಮ್ಮಿಯಿಲ್ಲ. ಯಾಕಂದರೆ, ಮೋಸ ಹೋಗುವ ಗಂಡ್ಮಕ್ಕಳ ವೀಕ್ನೆಸ್ ತಿಳಿದುಕೊಂಡೆ ಗಾಳ ಹಾಕುತ್ತಾರೆ. ಇಂತಹ ಗಾಳಕ್ಕೆ ಸಿಲಿಕಾನ್ ಸಿಟಿಯ ಅಶೋಕನಗರ ಪೊಲೀಸ್ ಠಾಣೆ ವ್ಯಾಪ್ತಿಯ ಉದ್ಯಮಿಯೊಬ್ಬ ಸಿಲುಕಿಕೊಂಡಿದ್ದಾನೆ. ಸಿನಿಮಾ ಮಾಡುವ ನೆಪದಲ್ಲಿ ಉದ್ಯಮಿಗಳನ್ನು(Businessman) ಖೆಡ್ಡಕ್ಕೆ ಬೀಳಿಸುತ್ತಿದ್ದಳು. ನಂತರ ಅವರ ಬಳಿ ಕಷ್ಟವಿದೆ ಎಂದು ಹೇಳಿ ಲಕ್ಷ ಲಕ್ಷ ಹಣ ಪಡೆಯುತ್ತಿದ್ದಳು. ಮುಂದೆ ಅವರು ಹಣ ಕೇಳಿದರೆ ಅವರನ್ನು ತನ್ನ ರೂಮಿಗೆ ಕರೆಸಿಕೊಂಡು ಖಾಸಗಿ ಕ್ಷಣಗಳನ್ನು ಕಳೆಯುತ್ತಿದ್ದಳು.
ಹೀಗೆ ಸುಂದರಿಯ ಮಾತು ನಂಬಿ ಹೋಗಿ ಬೆತ್ತಲಾಗಿದ್ದ ಉದ್ಯಮಿ ಹನಿಟ್ರ್ಯಾಪ್ ಗೆ(Honey Trapping) ಸಿಲುಕಿ ಬರೋಬ್ಬರಿ 40 ಲಕ್ಷ ರೂಪಾಯಿ ಕಳೆದುಕೊಂಡಿದ್ದಾನೆ. ಖಾಸಗಿ ವಿಡಿಯೋಗಳನ್ನು ಇಟ್ಟುಕೊಂಡ ಆ ಯುವತಿಯ ಗ್ಯಾಂಗ್ ಬ್ಲ್ಯಾಕ್ ಮೇಲ್ ಮಾಡುತ್ತಲೇ ಬಂದಿದೆ. ಕಾವ್ಯ, ರವಿ ಹಾಗೂ ದಿಲೀಪ್ ಎನ್ನುವ ಗ್ಯಾಂಗ್ ವಿರುದ್ಧ ಅಶೋಕನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾನೆ. ವಿಡಿಯೋಗಳನ್ನು ಮಾಧ್ಯಮಕ್ಕೆ ಕೊಡುತ್ತೇವೆ. ಸಾಮಾಜಿಕ ಜಾಲತಾಣಗಳಲ್ಲಿ ಅಪ್ ಲೋಡ್ ಮಾಡುತ್ತೇವೆ ಎಂದು ಬೆದರಿಕೆ ಹಾಕಿ ಚಿನ್ನಾಭರಣ, ಹಣ ಸುಲಿಗೆ ಮಾಡಿದ್ದಾರೆ ಎಂದು ಹೇಳಿದ್ದಾನೆ. ಪೊಲೀಸರು ಆರೋಪಿಗಳಿಗೆ ಬಲೆ ಬೀಸಿದ್ದಾರೆ. ಕೈಯಲ್ಲಿ ದುಡ್ಡು, ಮನಸ್ಸಲ್ಲಿ ಹೆಣ್ಣಿನ ಚಪಲ ಇದ್ದರೆ ಇಂತಹ ಅನಾಹುತಗಳು ತಪ್ಪಿದ್ದಲ್ಲ. ಹೀಗಾಗಿಯೇ ನಿತ್ಯ ಹನಿಟ್ರ್ಯಾಪ್ ಪ್ರಕರಣಗಳು ನಡೆಯುತ್ತಲೇ ಇವೆ.