ಪ್ರಜಾಸ್ತ್ರ ಸುದ್ದಿ
ಹುಬ್ಬಳ್ಳಿ(Hubballi): ಬೆಂಗಳೂರಲ್ಲಿ ಪಾಕಿಸ್ತಾನ ಮೂಲದ(Pakistani Citizens) ಕುಟುಂಬ ಹಾಗೂ ವಿದೇಶಿ ಪ್ರಜೆಗಳು ಅಕ್ರಮವಾಗಿ ವಾಸವಾಗಿದ್ದಾರೆ ಎನ್ನುವುದು ಗೊತ್ತಾದ ತಕ್ಷಣ ಅವರನ್ನು ನಮ್ಮ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಆದರೆ, ಅವರು ನಕಲಿ ಪಾಸ್(Fake Passport) ಪೋರ್ಟ್ ಮಾಡಿಸಿಕೊಂಡಿದ್ದಾರೆ ಎಂದರೆ ಕೇಂದ್ರದ ಗುಪ್ತಚರ ಸಂಸ್ಥೆಗಳ ವೈಫಲ್ಯ ಅಲ್ಲವೇ ಎಂದು ಗೃಹ ಸಚಿವ ಜಿ.ಪರಮೇಶ್ವರ್ ಕೇಳಿದ್ದಾರೆ. ನಗರದಲ್ಲಿ ಇಂದು ಮಾತನಾಡಿದ ಅವರು, ಇಲ್ಲಿರುವ ಕೆಲವು ಪಾಕಿಸ್ತಾನಿಗಳ ಬಗ್ಗೆ ಮಾಹಿತಿ ಪಡೆದಿದ್ದೇವೆ.
ರಾ(RAW, ಐಬಿ(IB) ಸೇರಿ ಇತರೆ ಗುಪ್ತಚರ ಸಂಸ್ಥೆಗಳು ಕೇಂದ್ರದ ಅಡಿಯಲ್ಲಿವೆ. ವಿದೇಶಿಗರು ನಕಲಿ ಪಾಸ್ ಪೋರ್ಟ್ ಮಾಡಿಸಿಕೊಂಡು ಬೆಂಗಳೂರಿಗೆ ಹೇಗೆ ಬಂದರು. ನಕಲಿ ಪಾಸ್ ಪೋರ್ಟ್ ಮಾಡಿಸಲು ಅವರಿಗೆ ನೆರವಾಗಿದ್ದು ಯಾರು? ಇದೆಲ್ಲದರ ಮೇಲೆ ಕೇಂದ್ರ ತನಿಖಾ ಸಂಸ್ಥೆಗಳು ಗಮನ ಹರಿಸಬೇಕಲ್ಲವಾ? ಈ ಬಗ್ಗೆ ನಮ್ಮ ಪೊಲೀಸರ ಗಮನಕ್ಕೆ ಬಂದ ತಕ್ಷಣ ಬಂಧಿಸಿದ್ದಾರೆ. ನಮ್ಮ ಪೊಲೀಸರು ಸಮರ್ಥರಿದ್ದಾರೆ. ಉಳಿದವರನ್ನು ಸಹ ಪತ್ತೆ ಹಚ್ಚುತ್ತೇವೆ ಅಂತಾ ಹೇಳಿದರು