ಪ್ರಜಾಸ್ತ್ರ ಸುದ್ದಿ
ಬೆಂಗಳೂರು(Bengaloru): ಎಂಎಲ್ಸಿ ಹಾಗೂ ಸಿಎಂ ಪುತ್ರ ಯತೀಂದ್ರ ನೀಡಿರುವ ಹೇಳಿಕೆ ಇದೀಗ ರಾಜ್ಯ ರಾಜಕೀಯದಲ್ಲಿ ಹೊಸ ಅಲೆ ಎಬ್ಬಿಸಿದೆ. ಸಚಿವ ಸತೀಶ್ ಜಾರಕಿಹೊಳಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ನಂತರ ನಾಯಕತ್ವ ವಹಿಸಿಕೊಳ್ಳಲಿದ್ದಾರೆ ಎಂದು ಹೇಳಿದ್ದಾರೆ ಅನ್ನೋ ವಿಚಾರವಾಗಿ ಗೃಹ ಸಚಿವ ಜಿ.ಪರಮೇಶ್ವರ್ ಮಾತನಾಡಿದ್ದು, ಸೈದ್ದಾಂತಿಕವಾಗಿ ಸಿಎಂ ಹಾದಿಯಲ್ಲಿ ಹೋಗುತ್ತಿದ್ದಾರೆ. ಅಹಿಂದ ಪ್ರಾರಂಭವಾದಾಗ ಸತೀಶ್ ಜಾರಕಿಹೊಳಿ ಬಹಳ ಮುಖ್ಯ ಪಾತ್ರ ವಹಿಸಿದ್ದರು. ಹೀಗಾಗಿ ಆ ರೀತಿ ಹೇಳಿದ್ದಾರೆ. ನಾಯಕತ್ವದ ದೃಷ್ಟಿಯಿಂದ ಹೇಳಿಲ್ಲ ಎಂದಿದ್ದಾರೆ.
ಅವರ ಪಕ್ಷದ ಬದ್ಧತೆ, ಸಮಾಜದ ಬದ್ಧತೆ ಸಿಎಂ ಸಿದ್ದರಾಮಯ್ಯನವರೊಂದಿಗೆ ಹೋಲುತ್ತಾರೆ ಎನ್ನುವ ಮಾತಿನಲ್ಲಿ ಹೇಳಿದ್ದಾರೆ. ಪದೆಪದೆ ನಾಯಕತ್ವದ ಬಗ್ಗೆ ಕೇಳಿದರೆ ಏನೂ ಹೇಳಕ್ಕೆ ಆಗಲ್ಲ. ಸಿಎಲ್ ಪಿ ಸಭೆ ನಡೆಯುತ್ತೆ. ಹೈಕಮಾಂಡ್ ನಿಂದ ಒಬ್ಬರು ವೀಕ್ಷಕರು ಬರುತ್ತಾರೆ. ಎಲ್ಲರ ತೀರ್ಮಾನ ತೆಗೆದುಕೊಂಡು ಹೈಕಮಾಂಡ್ ಘೋಷಣೆ ಮಾಡುತ್ತಾರೆ. ಇದು ನಮ್ಮಲ್ಲಿರುವ ಪದ್ಧತಿ ಎಂದು ಗೃಹ ಸಚಿವ ಜಿ.ಪರಮೇಶ್ವರ್ ಹೇಳಿದ್ದಾರೆ.




