ಪ್ರಜಾಸ್ತ್ರ ಸುದ್ದಿ
ಶಹಾಪುರ(Shapura): ಯಾದಗಿರಿ(Yadagiri) ಜಿಲ್ಲೆಯ ಶಹಾಪುರ ನಗರದ ಖಾಸಗಿ ಶಾಲೆಯಲ್ಲಿ 10ನೇ ತರಗತಿ ಓದುತ್ತಿದ್ದ ವಿದ್ಯಾರ್ಥಿ(Student) ಚೇತನ್ ಅನಾರೋಗ್ಯದ ಹಿನ್ನಲೆಯಲ್ಲಿ ಮೃತಪಟ್ಟಿದ್ದಾನೆ. ಮಗನನ್ನು ಕಳೆದುಕೊಂಡ ದುಃಖದಲ್ಲಿರುವ ಪಾಲಕರು ಶಾಲೆಯ ಶಿಕ್ಷಕರ ನಿರ್ಲಕ್ಷ್ಯವೇ ಇದಕ್ಕೆ ಕಾರಣವೆಂದು ಆರೋಪಿಸಿದ್ದಾರೆ. ಡಿಡಿಯು ಕನ್ನಡ ಮಾಧ್ಯಮ ಖಾಸಗಿ ವಸತಿ ಶಾಲೆಯಲ್ಲಿ ಚೇತನ್ ಹಾಗೂ ಸಹೋದರಿ ಓದುತ್ತಿದ್ದಾರೆ. ಅನಾರೋಗ್ಯದ ಹಿನ್ನಲೆಯಲ್ಲಿ ಕಳೆದ ಎರಡು ದಿನಗಳ ಹಿಂದೆ ಮನೆಗೆ ಕರೆದುಕೊಂಡು ಹೋಗಲಾಗಿದೆ.
ಹೆತ್ತವರು ಆಸ್ಪತ್ರೆಗೆ ತೋರಿಸಿದ್ದರು. ಇವತ್ತು ಶಾಲೆಯಲ್ಲಿ ಕಿರುಪರೀಕ್ಷೆಯಿದೆ ಎಂದು ಬಂದಿದ್ದಾನೆ. ಪರೀಕ್ಷೆ ಬರೆಯುವ ವೇಳೆ ಸುಸ್ತಾಗಿದೆ. ವಾಂತಿ ಮಾಡಿಕೊಂಡಿದ್ದಾನೆ. ಹೀಗಾಗಿ ಶಾಲೆಯಲ್ಲಿಯೇ ವಿಶ್ರಾಂತಿ ಪಡೆಯುವಂತೆ ಶಿಕ್ಷಕರು ಹೇಳಿದ್ದಾರಂತೆ. ಮನೆಗೆ ಫೋನ್ ಮಾಡು ಎಂದು ತಂಗಿಗೆ ಹೇಳಿದ್ದಾನಂತೆ. ಆದರೆ, ಮುಖ್ಯಶಿಕ್ಷಕರ ಅನುಮತಿಯಿಲ್ಲದೆ ಫೋನ್ ಕೊಡುವುದಿಲ್ಲವೆಂದು ಶಿಕ್ಷಕರು ಹೇಳಿ ನಿರ್ಲಕ್ಷ್ಯವಹಿಸಿದ್ದಾರಂತೆ. ಕೊನೆಗೆ ವಿದ್ಯಾರ್ಥಿ ಶಾಲೆಯಲ್ಲಿಯೇ(Death) ಮೃತಪಟ್ಟಿದ್ದಾನೆ. ನಂತರ ಸಹಪಾಠಿಗಳು ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದಾರೆ ಎಂದು ಹೇಳಲಾಗುತ್ತಿದೆ. ಈ ಬಗ್ಗೆ ಶಹಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.