Ad imageAd image

ಖಾಸಗಿ ಶಾಲೆಗಳ ನಿರ್ಧಾರಕ್ಕೆ ಪೋಷಕರ ಸಂಘ ವಿರೋಧ

ಶಿಕ್ಷಣ ಇಲಾಖೆಯಲ್ಲಿನ ಭ್ರಷ್ಟಾಚಾರ ಖಂಡಿಸಿ ಸ್ವಾತಂತ್ರ್ಯ ದಿನಾಚರಣೆಯಂದು ಕರಾಳ ದಿನ ಆಚರಿಸಲು ಖಾಸಗಿ ಶಾಲೆಗಳು ನಿರ್ಧರಿಸುವುದಕ್ಕೆ ತೀವ್ರ ವಿರೋಧ ವ್ಯಕ್ತವಾಗಿದೆ.

Nagesh Talawar
ಖಾಸಗಿ ಶಾಲೆಗಳ ನಿರ್ಧಾರಕ್ಕೆ ಪೋಷಕರ ಸಂಘ ವಿರೋಧ
WhatsApp Group Join Now
Telegram Group Join Now

ಪ್ರಜಾಸ್ತ್ರ ಸುದ್ದಿ

ಬೆಂಗಳೂರು(Bengaloru): ಶಿಕ್ಷಣ ಇಲಾಖೆಯಲ್ಲಿನ ಭ್ರಷ್ಟಾಚಾರ ಖಂಡಿಸಿ ಸ್ವಾತಂತ್ರ್ಯ(independence day) ದಿನಾಚರಣೆಯಂದು ಕರಾಳ ದಿನ ಆಚರಿಸಲು ಖಾಸಗಿ ಶಾಲೆಗಳು ನಿರ್ಧರಿಸುವುದಕ್ಕೆ ತೀವ್ರ ವಿರೋಧ ವ್ಯಕ್ತವಾಗಿದೆ. ಖಾಸಗಿ ಶಾಲಾ, ಕಾಲೇಜು ಪೋಷಕ ಸಂಘ ಇದನ್ನು ವಿರೋಧಿಸಿದ್ದು, ದೇಶಕ್ಕೆ ಹೋರಾಡಿ ಮಡಿದವರಿಗೆ, ದೇಶಕ್ಕೆ ಮಾಡುವ ಅಪಮಾನ. ಇದರಿಂದ ಮಕ್ಕಳಿಗೆ ಸ್ವಾತಂತ್ರ್ಯ ದಿನಾಚರಣೆಯ ಬಗ್ಗ ತಿಳಿಯುವುದು ಹೇಗೆ ಎಂದು ಆಕ್ರೋಶ ವ್ಯಕ್ತಪಡಿಸಿದೆ.

ಈ ಬಗ್ಗೆ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರಿಗೆ ಪತ್ರ ಬರೆದಿದ್ದು, ಖಾಸಗಿ, ಅನುದಾನ ರಹಿತ ಶಾಲೆಗಳ ಬೇಡಿಕೆಯನ್ನು ಈಡೇರಿಸಿ ಎಂದು ಮನವಿ ಮಾಡಿದ್ದಾರೆ. ಮಕ್ಕಳಿಗೆ ಸ್ವಾತಂತ್ರ್ಯ ದಿನಾಚರಣೆಯ ಮಹತ್ವ ತಿಳಿಸಬೇಕು. ದೇಶಕ್ಕಾಗಿ ಪ್ರಾಣ ಕೊಟ್ಟವರ ಬಗ್ಗೆ ಹೇಳಬೇಕು. ಈ ದಿನವನ್ನು ಪ್ರತಿಭಟನೆಗೆ ಬಳಸುವುದು ಸರಿಯಲ್ಲ. ಈ ಬಗ್ಗೆ ಸರ್ಕಾರ ಖಾಸಗಿ ಶಾಲೆಗಳಿಗೆ ಮಾರ್ಗಸೂಚಿ ಹೊರಡಿಸಬೇಕು. ನಿಯಮ ಉಲ್ಲಂಘಿಸುವ ಶಾಲೆಗಳ ವಿರುದ್ಧ ದೇಶದ್ರೋಹದ ದೂರು ದಾಖಲಿಸಬೇಕು ಎಂದು ಖಾಸಗಿ ಶಾಲಾ, (private school and college)ಕಾಲೇಜು ಪೋಷಕರ ಸಂಘದ ಸಮನ್ವಯ ಸಮಿತಿ ಅಧ್ಯಕ್ಷ ಬಿ.ಎನ್ ಯೋಗಾನಂದ್ ತಿಳಿಸಿದ್ದಾರೆ.

ಆಗಸ್ಟ್ 15ರಂದು ಅನುದಾನ ರಹಿತ, ಖಾಸಗಿ ಶಾಲೆಗಳ ಮುಖ್ಯಸ್ಥರು, ಶಿಕ್ಷಕರು, ಬೋಧಕೇತರ ಸಿಬ್ಬಂದಿ ಕಪ್ಪು ಪಟ್ಟಿ ಧರಿಸಿ ಕರಾಳ ದಿನ ಆಚರಿಸಲು ಆಗಸ್ಟ್ 6ರಂದು ಘೋಷಿಸಲಾಗಿದೆ. ಇದಕ್ಕೆ ವಿರೋಧ ವ್ಯಕ್ತವಾಗಿದ್ದು, ಸರ್ಕಾರ ಕೂಡಲೇ ಅಂತಹ ಶಾಲೆಗಳ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕು. ದೇಶದ್ರೋಹ ಪ್ರಕರಣ ದಾಖಲಿಸಬೇಕು ಎನ್ನುವ ಕೂಗು ಎದ್ದಿದೆ.

WhatsApp Group Join Now
Telegram Group Join Now
Share This Article