ಪ್ರಜಾಸ್ತ್ರ ಸುದ್ದಿ
ಬಾಲಿವುಡ್ ಅಂಗಳದಲ್ಲಿನ ಹಲವು ಕಾಮಿಡಿ ಸಿನಿಮಾಗಳಲ್ಲಿ ಹೇರಾ ಫೇರಿ ಸಹ ಒಂದು. ಅಕ್ಷಯ್ ಕುಮಾರ್, ಸುನಿಲ್ ಶೆಟ್ಟಿ, ಪರೇಶ್ ರಾವಲ್ ಕಾಂಬಿನೇಷನ್ ಸಿನಿಮಾ ಸಾಕಷ್ಟು ಯಶಸ್ವಿಗಳಿಸಿದೆ. ಅದರ ಮುಂದುವರೆದ ಸರಣಿ ಹೇರಾ ಫೇರಿ-3 ಚಿತ್ರದಿಂದ ಹಿರಿಯ ನಟ ಪರೇಶ್ ರಾವಲ್ ಹೊರ ನಡೆದಿದ್ದಾರೆ. ಇದಕ್ಕೆ ಹಣದ ವ್ಯವಹಾರ ಕಾರಣವೆಂದು ತಿಳಿದು ಬಂದಿದೆ. ಈ ಚಿತ್ರದಲ್ಲಿ ಪರೇಶ್ ರಾವಲ್, ಬಾಬು ಭಯ್ಯಾ ಪಾತ್ರ ಮಾಡುತ್ತಿದ್ದರು. ಇದಕ್ಕಾಗಿ 15 ಕೋಟಿ ರೂಪಾಯಿ ಸಂಭಾವನೆ ಫಿಕ್ಸ್ ಆಗಿದೆ. ಸಿನಿಮಾದ ನಿರ್ದೇಶಕರಲ್ಲಿ ಒಬ್ಬರಾದ ನಟ ಅಕ್ಷಯ್ ಕುಮಾರ್ ಮುಂಗಡವಾಗಿ 11 ಲಕ್ಷ ರೂಪಾಯಿ ಕೊಟ್ಟಿದ್ದಾರಂತೆ.
ಉಳಿದ 14.89 ಕೋಟಿ ರೂಪಾಯಿ ಹಣವನ್ನು ಸಿನಿಮಾ ಬಿಡುಗಡೆಯಾಗಿ ಒಂದು ತಿಂಗಳಲ್ಲಿ ಕೊಡುವುದಾಗಿ ಹೇಳಿದ್ದರಂತೆ. ಅಂದರೆ 2026ರ ಕೊನೆಯಲ್ಲಿ ಅಥವ 2027ರಲ್ಲಿ. ಆದರೆ, ತಮ್ಮ ಉಳಿದ ಸಂಭಾವನೆ ಪಡೆಯಲು ಒಂದು ವರ್ಷ ಕಾಯಲು ಪರೇಶ್ ರಾವಲ್ ಸಾಧ್ಯವಿಲ್ಲವೆಂದು ಹೇಳಿದ್ದಾರಂತೆ. ಹೀಗಾಗಿ ತಾವು ಮುಂಗಡ ಪಡೆದಿದ್ದ 11 ಲಕ್ಷ ರೂಪಾಯಿಗೆ ಶೇಕಡ 15ರಷ್ಟು ಬಡ್ಡಿ ಸೇರಿ ಹಣ ವಾಪಸ್ ಮಾಡಿದ್ದಾರಂತೆ. ಆದರೆ, ನಟ ಅಕ್ಷಯ್ ಕುಮಾರ್ ನೋಟಿಸ್ ಕಳಿಸಿದ್ದಾರಂತೆ. ಒಪ್ಪಂದಕ್ಕೆ ಸಹಿ ಹಾಕಿ, ಕೆಲ ದೃಶ್ಯಗಳಲ್ಲಿ ಭಾಗವಹಿಸಿ ಏಕಾಏಕಿ ಸಿನಿಮಾ ಬಿಟ್ಟು ಹೋಗಿದ್ದಾರೆ. ಇದು ವೃತ್ತಿಪರ ನಡವಳಿಕೆ ಅಲ್ಲವೆಂದು 25 ಕೋಟಿ ರೂಪಾಯಿ ಪರಿಹಾರದ ಲೀಗಲ್ ನೋಟಿಸ್ ಕಳಿಸಿದ್ದಾರಂತೆ. ಹೀಗಾಗಿ ಇವರ ನಡುವಿನ ಸ್ನೇಹ ಮುರಿದು ಬಿದ್ದಿದೆ.