ಪ್ರಜಾಸ್ತ್ರ ಕ್ರೀಡಾ ಸುದ್ದಿ
ಫ್ರಾನ್ಸ್ ನ ಪ್ಯಾರಿಸ್ ನಲ್ಲಿ ಶನಿವಾರ ಒಲಿಂಪಿಕ್ಸ್(Olympics) ಟೂರ್ನಿಗೆ ಅದ್ಧೂರಿ ಚಾಲನೆ ಸಿಕ್ಕಿದೆ. ಕ್ರೀಡಾಕೂಟದ ಉದ್ಘಾಟನೆ ವೇಳೆ ಪ್ರದರ್ಶಿಸಿದ ಕಲೆಯೊಂದು ವಿವಾದದ ಸ್ವರೂಪ ಪಡೆದುಕೊಂಡಿದೆ. ಕ್ರೈಸ್ತ್ ಸಮುದಾಯ ಇದನ್ನು ಖಂಡಿಸಿದ್ದು, ಆಯೋಜಕರು ಕ್ಷಮೆ ಕೇಳಿದ್ದಾರೆ. ಖ್ಯಾತ ಕಲಾವಿದ ಲಿಯಾನರ್ಡೊ ಡಾವಿಂಚಿ ಅವರ ‘ದಿ ಲಾಸ್ಟ್ ಸಪ್ಪರ್(The Last Supper) ಪೇಟಿಂಗ್ ಅನ್ನು ಡ್ರ್ಯಾಗ್ ಕ್ವೀನ್ ಗಳಿಂದ ಪ್ರದರ್ಶನ ನೀಡಲಾಗಿದೆ.
ಫೆಸ್ಟಿವಿಟಿ ವಿಭಾಗದಲ್ಲಿ ಪ್ರಸಿದ್ಧ ಮೂವರು ಕ್ರಿಸ್ತನ(Jesus) ಹೋಲಿಕೆಯೊಂದಿಗೆ ಬೆತ್ತಲೆಯಾಗಿ ಡ್ರ್ಯಾಕ್ ಆ್ಯಕ್ಟ್ ಪ್ರದರ್ಶಿಸಿದ್ದರು. ಇದು ವ್ಯಾಪಕ ಟೀಕೆಗೆ ಒಳಗಾಯಿತು. ಹೀಗಾಗಿ ಆಯೋಜಕರು ಕ್ಷಮೆ ಕೇಳಿದ್ದಾರೆ. ಯಾವುದೇ ಧಾರ್ಮಿಕ ನಂಬಿಕೆಗಳನ್ನು ಅಗೌರವಿಸುವ ಉದ್ದೇಶ ಹೊಂದಿಲ್ಲ. ಎಲ್ಲರೂ ಒಳಗೊಳ್ಳುವ ಸಮಾರಂಭ ಇದಾಗಿತ್ತು ಎಂದು ತಿಳಿಸಲಾಗಿದೆ.