ಪ್ರಜಾಸ್ತ್ರ ಸುದ್ದಿ
ಪ್ಯಾರಿಸ್(Paris): ಫ್ರಾನ್ಸ್ ನಲ್ಲಿ ನಡೆಯುತ್ತಿರುವ ಪ್ಯಾರಿಸ್ ಒಲಿಂಪಿಕ್ಸ್-2024(paris olympics-2024) ಟೂರ್ನಿಯಲ್ಲಿ ಭಾರತದ ಜಾವೆಲಿನ್ ಥ್ರೋ ನೀರಜ್ ಚೋಪ್ರಾ(neeraj chopra) ಬೆಳ್ಳಿ ಪದಕ ಗಳಿಸುವ ಮೂಲಕ ಮತ್ತೊಂದು ಸಾಧನೆ ಮಾಡಿದರು. ಹಿಂದಿನ ಟೊಕಿಯೋ ಒಲಿಂಪಿಕ್ಸ್ ನಲ್ಲಿ ಚಿನ್ನದ ಸಾಧನೆ ಮಾಡಿದ್ದರು. ಸತತ ಎರಡು ಒಲಿಂಪಿಕ್ಸ್ ಪದಕ ಗೆದ್ದ ದಾಖಲೆ ಮಾಡಿದರು. ಪಾಕಿಸ್ತಾನದ ಅರ್ಷದ್ ನದೀಂ(Arshad Nadeem) ಚಿನ್ನದ ಪದಕಕ್ಕೆ ಕೊರಳೊಡ್ಡಿದರು. ಕಳೆದ ಟೊಕಿಯೋದಲ್ಲಿ ಇವರು 5ನೇ ಸ್ಥಾನ ಪಡೆದಿದ್ದರು.
ಇಲ್ಲಿ ಇನ್ನೊಂದು ವಿಶೇಷ ಏನಂದರೆ ಕಳೆದ ಬಾರಿ ನೀರಜ್ ಚಿನ್ನ(Gold medal), ಅರ್ಷದ್ ನದೀಂ ಬೆಳ್ಳಿ(silver medal) ಗೆದ್ದಿದ್ದರು. ಈ ಬಾರಿ ನದೀಂ ಚಿನ್ನ, ನೀರಜ್ ಬೆಳ್ಳಿ ಜಯಿಸಿದ್ದಾರೆ. ಭಾರತ ಹಾಗೂ ಪಾಕಿಸ್ತಾನ ನಡುವೆ ರಾಜತಾಂತ್ರಿಕ ವಿಚಾರಗಳು ಏನೇ ಇದ್ದರೂ ಕ್ರೀಡಾಮನೋಭಾವದಲ್ಲಿ ಇವರಿಬ್ಬರು ಜೊತೆಗಾರರಂತೆ ಇದ್ದಾರೆ. ಅದಕ್ಕೆ ಕಳೆದ ಬಾರಿ ನದೀಂ ಅವರು ನೀರಜ್ ಜಾವೆಲನ್ ಬಳಸಿದ್ದು ಸ್ಮರಿಸಿಕೊಳ್ಳಬಹುದು.