ಪ್ರಜಾಸ್ತ್ರ ಸುದ್ದಿ
ಕಲಬುರಗಿ(Kalaburagi): ಪಂಪರ್ ಆಪರೇಟರ್ ದುಡಿಮೆಯ ಆರು ತಿಂಗಳ ಬಾಕಿ ವೇತನ ಹಾಗೂ ಮರು ನೇಮಕ ಮಾಡಿಕೊಳ್ಳಲು 17 ಸಾವಿರ ರೂಪಾಯಿ ಲಂಚ ಪಡೆಯುತ್ತಿದ್ದ ವೇಳೆ ಲೋಕಾಯುಕ್ತ ಬಲೆಗೆ ಗ್ರಾಮ ಪಂಚಾಯ್ತಿ ಅಭಿವೃಧಿ ಅಧಿಕಾರಿಯೊಬ್ಬರು ಬಿದ್ದಿದ್ದಾರೆ. ಕವಲಗಾ(ಬಿ) ಗ್ರಾಮ ಪಂಚಾಯ್ತಿಯ ಪಿಡಿಒ ಪ್ರೀತಿರಾಜ್ ಲಂಚ ಪಡೆಯುತ್ತಿದ್ದಾಗ ಲೋಕಾಯುಕ್ತ ಅಧಿಕಾರಿಗಳ ಕೈಗೆ ಸಿಕ್ಕಿಬಿದ್ದಿದ್ದಾರೆ.
ಪಂಪ್ ಆಪರೇಟರ್ ಗುರುಸಿದ್ಧಯ್ಯ ಎಂಬುವರ 6 ತಿಂಗಳ ವೇತನ ಬಾಕಿ ಇದೆ. ಅದನ್ನು ಮಂಜೂರು ಮಾಡಲು ಜೊತೆಗೆ ಅವರನ್ನು ಮರು ನೇಮಕ ಮಾಡಿಕೊಳ್ಳಲು 17 ಸಾವಿರ ರೂಪಾಯಿ ಬೇಡಿಕೆ ಇಟ್ಟಿದ್ದಾರೆ. ಧರಿಯಾಪುರದ ಉಪ್ಪಿನ ಲೇಔಟ್ ಮನೆಯಲ್ಲಿ ಪೋನ್ ಪೇ ಮೂಲಕ ಹಣ ಪಡೆಯುವ ವೇಳೆ ಸಿಕ್ಕಿಬಿದ್ದಿದ್ದಾರೆ.