ಪ್ರಜಾಸ್ತ್ರ ಸುದ್ದಿ
ಮೀರತ್: ಇತ್ತೀಚಿನ ದಿನಗಳಲ್ಲಿ ಮನುಷ್ಯ ಅತ್ಯಂತ ಕ್ರೂರಿಯಾಗುತ್ತಿದ್ದಾನೆ. ಮಾನವೀಯ ಗುಣಗಳು ಹೋಗಿ ರಾಕ್ಷಸತನ ಹೆಚ್ಚಾಗುತ್ತಿದೆ. ಹೀಗಾಗಿ ಪತ್ನಿಯನ್ನು ಪತಿ ಕೊಲೆ ಮಾಡುವುದು, ಪತಿಯನ್ನು ಪತ್ನಿ ಕೊಲೆ ಮಾಡುವುದು, ಪ್ರೀತಿಸಿದವನ್ನು ಹತ್ಯೆ ಮಾಡುವುದು ನಿತ್ಯ ನಡೆಯುತ್ತಲೇ ಇದೆ. ಅದು ಎಷ್ಟೊಂದು ಭೀಕರವಾಗಿ ಅಂದರೆ ಮೃತದೇಹವನ್ನು ತುಂಡು ತುಂಡಾಗಿ ಕತ್ತರಿಸಿ ಫ್ರಿಡ್ಜ್, ಡ್ರಮ್ಸ್ ನಲ್ಲಿ ತುಂಬಿಡುವಷ್ಟರ ಮಟ್ಟಿಗೆ ಕ್ರೌರ್ಯ ಮರೆಯುತ್ತಿದ್ದಾರೆ. ಇಂತಹದ್ದೇ ಭಯಾನಕ ಘಟನೆ ಉತ್ತರ ಪ್ರದೇಶದ ಮೀರತ್ ನಲ್ಲಿ ನಡೆದಿದೆ. ಪ್ರಿಯಕರನ ಜೊತೆ ಸೇರಿ ಪತಿಯನ್ನು ಹತ್ಯೆ ಮಾಡಿ 15 ತುಂಡುಗಳನ್ನು ಮಾಡಿದ ಭೀಭತ್ಸಕಾರಿ ಕೃತ್ಯ ಎಸಗಲಾಗಿದೆ.
ಮಗಳ ಐದು ವರ್ಷದ ಹುಟ್ಟು ಹಬ್ಬ ಆಚರಿಸಲು ಲಂಡನ್ ನಿಂದ ಬಂದಿದ್ದ ಸೌರಭ್ ಕುಮಾರ್ ಕೊಲೆಯಾದ ವ್ಯಕ್ತಿಯಾಗಿದ್ದಾನೆ. ಇತನ ಪತ್ನಿ ಮುಸ್ಕಾನ್ ಹಾಗೂ ಪ್ರಿಯಕರ ಸಾಹಿಲ್ ಶುಕ್ಲಾ ಕೊಲೆ ಆರೋಪಿಗಳಾಗಿದ್ದಾರೆ. ಸೌರಭ್ ಕುಮಾರ್ ಹಾಗೂ ಮುಸ್ಕಾನ್ 9 ವರ್ಷಗಳ ಹಿಂದೆ ಪ್ರೀತಿಸಿ ಮದುವೆಯಾಗಿದ್ದಾರೆ. ಮರ್ಚೆಂಟ್ ನೇವಿಯಲ್ಲಿ ಕೆಲಸ ಮಾಡುತ್ತಿದ್ದ ಸೌರಭ್ ಕುಮಾರ್ ಅದನ್ನು ಬಿಟ್ಟು ಪ್ಲೈವುಡ್ ಅಂಗಡಿಯಲ್ಲಿ ಕೆಲಸ ಮಾಡಲು ಶುರು ಮಾಡಿದ. ಮುಂದೆ ಅಲ್ಲಿಂದ ಲಂಡನ್ ಗೆ ತೆರಳಿ ಅಲ್ಲಿ ಮಾಲ್ ವೊಂದರಲ್ಲಿ ವ್ಯವಸ್ಥಾಪಕನಾಗಿ ಕೆಲಸ ಮಾಡುತ್ತಿದ್ದ. ಪತ್ನಿ ಹಾಗೂ ಮಗಳು ಪಿಹು ಮೀರತ್ ನ ಇಂದಿರಾನಗರದಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು.
ಮಾರ್ಚ್ 4ರಂದು ಸೌರಭ್ ಕುಮಾರಗೆ ಮಾದಕ ದ್ರವ್ಯ ಕುಡಿಸಿದ್ದಾರೆ. ನಂತರ ಚಾಕುವಿನಿಂದ ಆತನ ಎದೆಗೆ ಚುಚ್ಚಿ, ಕತ್ತು ಸೀಳಿ ಕೊಲೆ ಮಾಡಿದ್ದಾರೆ. ಬಳಿಕ ದೇಹವನ್ನು ಇಬ್ಬರು ಸೇರಿ ತುಂಡು ತುಂಡು ಮಾಡಿದ್ದಾರೆ. ಮಾರ್ಚ್ 5ರಂದು ಸಾಹಿಲ್ ಶುಕ್ಲಾ ದೊಡ್ಡ ಡ್ರಮ್ ತಂದಿದ್ದಾನೆ. ಡ್ರಮ್ ನಲ್ಲಿ ದೇಹದ ತುಂಡುಗಳನ್ನು ಹಾಕಿ, ಮಣ್ಣು, ಸೀಮೆಂಟ್ ತುಂಬಿ ನೀರು ಹಾಕಿದ್ದಾರೆ. ಬಳಿಕ ಡ್ರಮ್ ಸೀಲ್ ಮಾಡಿದ್ದಾರೆ. ಬಳಿಕ ಮಗಳನ್ನು ಕರೆದುಕೊಂಡು ಶಿಮ್ಲಾಗೆ ಹೋಗಿದ್ದಾಳೆ. ಅಲ್ಲಿಂದ ಬಂದು ತಂದೆ ಮುಂದೆ ಸೌರಭ್ ಕುಮಾರ್ ಕೊಲೆಯಾಗಿರುವ ಬಗ್ಗೆ ಹೇಳಿದ್ದಾಳೆ. ಈ ಕುರಿತು ಪೊಲೀಸರು ತನಿಖೆ ನಡೆಸಿ ಮುಸ್ಕಾನ್ ರಸ್ತೋಗಿ, ಸಾಹಿಲ್ ಶುಕ್ಲಾರನ್ನು ಬಂಧಿಸಿದ್ದು ತಪ್ಪು ಒಪ್ಪಿಕೊಂಡಿದ್ದಾರೆ. ಸಂಬಂಧ ಬೇಡವಾದಾಗ ಪ್ರೀತಿಯಿಂದಲೇ ಆಗಲಿ ಕಾನೂನಿಂದಲೇ ಆಗಲಿ ಪ್ರತ್ಯೇಕವಾಗುವುದು ಒಳ್ಳೆಯದು. ಈ ರೀತಿ ಜೀವ ತೆಗೆಯುವುದು ನಿಜಕ್ಕೂ ಘನಘೋರ.