ಪ್ರಜಾಸ್ತ್ರ ಸುದ್ದಿ
ಬೆಂಗಳೂರು(Bengaloru): ಅತ್ಯಾಚಾರ(Rape case), ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಬಂಧಿತನಾಗಿರುವ ಬಿಜೆಪಿ ಶಾಸಕ ಮುನಿರತ್ನ ಮನೆಯಲ್ಲಿ ಎಸ್ಐಟಿ ಅಧಿಕಾರಿಗಳು ಶೋಧ ಕಾರ್ಯ ನಡೆಸಿದ್ದಾರೆ. ಈ ವೇಳೆ ಸಿಕ್ಕ ಪೆನ್(Pendrive) ಡ್ರೈವ್, ಲ್ಯಾಪ್ ಟಾಪ್(Lap Top) ನಲ್ಲಿ ಬಿಜೆಪಿ ಸೇರಿದಂತೆ ಇತರೆ ರಾಜಕೀಯ ನಾಯಕರ ಖಾಸಗಿ ವಿಡಿಯೋಗಳು ಇವೆ ಎಂದು ಹೇಳಲಾಗುತ್ತಿದೆ.
ಕಳೆದ ಸೆಪ್ಟೆಂಬರ್ 28ರಂದು ಎಸ್ಐಟಿ(SIT) ಅಧಿಕಾರಿಗಳು ಮನೆ, ಕಚೇರಿ ಸೇರಿದಂತೆ 12 ಕಡೆಗಳಲ್ಲಿ ದಾಳಿ ನಡೆಸಿ ತಪಾಸಣೆ ನಡೆಸಿದ್ದರು. ಈ ವೇಳೆ ಸಿಕ್ಕ ಪೆನ್ ಡ್ರೈವ್, ಲ್ಯಾಪ್ ಟಾಪ್ ನಲ್ಲಿ ಕೆಲ ರಾಜಕಾರಣಿಗಳ, ಅಧಿಕಾರಿಗಳ ಹಾಗೂ ಮಹಿಳೆಯರ ಖಾಸಗಿ(Vedio) ವಿಡಿಯೋಗಳು ಇವೆ ಎಂದು ತಿಳಿದು ಬಂದಿದೆ. ದುರುದ್ದೇಶದ ಸಲುವಾಗಿಯೇ ಹನಿಟ್ರ್ಯಾಪ್ ರೀತಿಯಲ್ಲಿ ವಿಡಿಯೋ ರೆಕಾರ್ಡ್ ಮಾಡಿರುವ ಶಂಕೆಯಿದೆ. ಎಫ್ಎಸ್ಎಲ್ ಗೆ ಕಳಿಸಲಾಗಿದೆಯಂತೆ.