ಪ್ರಜಾಸ್ತ್ರ ಸುದ್ದಿ
ಸಿಂದಗಿ(Sindagi): ತಾಲೂಕಿನ ಚಾಂದಕವಟೆ ಗ್ರಾಮದಲ್ಲಿ ಶನಿವಾರ ಪಿಂಚಣಿ ಅದಾಲತ್ ಕಾರ್ಯಕ್ರಮ ನಡೆಯಿತು. ಗ್ರಾಮದ ಬಸವೇಶ್ವರ ದೇವಸ್ತಾನದಲ್ಲಿ ಆಯೋಜಿಸಿದ್ದ ಕಾರ್ಯಕ್ರಮವನ್ನು ಇಂಡಿ ಉಪವಿಭಾಗಾಧಿಕಾರಿ ಅನುರಾಧಾ ವಸ್ತ್ರದ ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು. ಗ್ರಾಮದಲ್ಲಿ ಎಷ್ಟು ಜನರು ಪಿಂಚಣಿಗೆ ಒಳಪಡುತ್ತಿದ್ದಾರೆ, ಅವರ ಸಮಸ್ಯೆಗಳು ಏನು, ಯಾವೆಲ್ಲ ತೊಂದರೆಗಳಿವೆ ಅನ್ನೋದು ಸೇರಿದಂತೆ ಗ್ರಾಮಸ್ಥರ ದೂರುಗಳನ್ನು ಆಲಿಸಿದರು.
ಇನ್ನು ಗ್ರಾಮದ ಸ್ಮಶಾನದ 9 ಎಕರೆ 9 ಗುಂಟೆ ಜಾಗವನ್ನು ಪ್ರಭಾವಿಗಳು ಅತಿಕ್ರಮಣ ಮಾಡಿಕೊಂಡಿದ್ದಾರೆ ಎನ್ನುವ ಆರೋಪ ಕೇಳಿ ಬಂದಿದೆ. ಸ್ಮಶಾನದ ಜಾಗದಲ್ಲಿ ಮನೆ, ಅಂಗಡಿಗಳನ್ನು ನಿರ್ಮಿಸಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಇದಕ್ಕೆ ಸಂಬಂಧಿಸಿದಂತೆ ಸೂಕ್ತ ಕ್ರಮ ತೆಗೆದುಕೊಳ್ಳುವ ಕುರಿತು ತಿಳಿಸಿದರು.
ಚಾಂದಕವಟೆ ಗ್ರಾವದಲ್ಲಿ 2 ಸಾವಿರಕ್ಕೂ ಹೆಚ್ಚು ಜನರು ಪಿಂಚಣಿಗೆ ಒಳಪಡುತ್ತಾರೆ. ಆದರೆ 60 ವರ್ಷ ಮೇಲ್ಪಟ್ಟವರಗಿಂತ ಬೇರೆಯವರಿಗೆ ಹಣ ಬರುತ್ತೆ. ಅಲ್ಲದೆ ಗ್ರಾಮದ ವಿವಿಧ ಸಮುದಾಯಗಳಿಗೆ ಸಂಬಂಧಿಸಿದ ಸ್ಮಶಾನ ಭೂಮಿಯನ್ನು ಒತ್ತುವರಿ ಮಾಡಿಕೊಂಡು ಮನೆ, ಅಂಗಡಿಗಳನ್ನು ಕಟ್ಟಿದ್ದಾರೆ. ಅವುಗಳನ್ನು ತೆರವುಗೊಳಿಸದೆ ಇದ್ದರೆ ತಹಶೀಲ್ದಾರ್ ಕಚೇರಿ ಮುಂದೆ ಹೆಣವಿಟ್ಟು ಪ್ರತಿಭಟನೆ ನಡೆಸಲಾಗುವುದು. – ನಿಂಗರಾಜ ಅತನೂರ, ಗ್ರಾಮಸ್ಥರು
ಈ ವೇಳೆ ಸಿಂದಗಿ ಉಪ ತಹಶೀಲ್ದಾರ್ ಇಂದರಬಾಯಿ ಬಳಗಾನೂರ, ಕಂದಾಯ ನಿರೀಕ್ಷಕ ಮಕಾಂದರ್, ತಲಾಟಿ ಹುಡೇದ, ಗ್ರಾಮಸ್ಥರಾದ ಪರಮಾನಂದ ಕಂಟಿಗೊಂಡ, ಸದಾನಂದ ಹಿರೇಮಠ, ದಿನೇಶ ಸಿಂದಗಿ, ಶಿದ್ದನಗೌಡ ಪಾಟೀಲ, ಸುಭಾಷ ಶಿರಕನಳ್ಳಿ, ಮಡೆಪ್ಪ ಸೊನ್ನದ, ಚಾಂದಸಾಬ್ ಮುಲ್ಲಾ, ಶೇಖರ ಕಲ್ಲೂರ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.