ಪ್ರಜಾಸ್ತ್ರ ಸುದ್ದಿ
ಬೆಂಗಳೂರು(Bengaloru): ಹೃದಯಾಘಾತದಿಂದ ವ್ಯಕ್ತಿಯೊಬ್ಬರು ನಡು ರಸ್ತೆಯಲ್ಲಿ ಮೃತಪಟ್ಟ ಘಟನೆ ಬನಶಂಕರಿಯ ಇಟ್ಟುಮಡು ಹತ್ತಿರ ನಡೆದಿದೆ. ವೆಂಕಟರಮಣನ್(34) ಮೃತ ದುರ್ದೈವಿ ಎಂದು ತಿಳಿದು ಬಂದಿದೆ. ಮಂಗಳವಾರ ಮುಂಜಾನೆ ಮನೆಯಲ್ಲಿದ್ದಾಗ ಎದೆನೋವು ಕಾಣಿಸಿಕೊಂಡಿದೆ. ಆಗ ಪತ್ನಿ ರೂಪಾ ಆಸ್ಪತ್ರೆಗೆ ಹೋಗುವುದು ಸೂಕ್ತವೆಂದು ಬೈಕ್ ನಲ್ಲಿ ಹತ್ತಿರದ ಕತ್ರಿಗುಪ್ಪೆ ಜನತಾ ಬಜಾರ್ ನ ಆಸ್ಪತ್ರೆಗೆ ಬಂದಿದ್ದಾರೆ. ಆದ್ರೆ, ಅಲ್ಲಿ ವೈದ್ಯರು ಇಲ್ಲದ ಕಾರಣ ಮತ್ತೊಂದು ಆಸ್ಪತ್ರೆಗೆ ಹೊರಟಿದ್ದಾರೆ.
ಬೈಕ್ ನಲ್ಲಿ ತೆರಳುತ್ತಿದ್ದಾಗ ಕದಿರೇನಹಳ್ಳಿ ಹತ್ತಿರ ತೀವ್ರ ಎದೆನೋವು ಕಾಣಿಸಿಕೊಂಡು ರಸ್ತೆ ನಡುವೆ ಕುಸಿದು ಬಿದ್ದಿದ್ದಾರೆ. ಪತ್ನಿ ರೂಪಾ ರಸ್ತೆಯಲ್ಲಿ ಹೋಗುತ್ತಿದ್ದ ವಾಹನ ಸವಾರರಿಗೆ ಕೈ ಮುಗಿದು ಬೇಡಿಕೊಂಡರು ಯಾರೂ ಸಹಾಯಕ್ಕೆ ಬಂದಿಲ್ವಂತೆ. ಸರಿಯಾದ ಸಮಯಕ್ಕೆ ಚಿಕಿತ್ಸೆ ಸಿಗದೆ ವೆಂಕಟರಮಣನ್ ಮೃತಪಟ್ಟಿದ್ದಾರೆ. ಸಾವಿನ ನಡುವೆಯೂ ಕುಟುಂಬಸ್ಥರು ಸಾರ್ಥಕತೆ ಮೆರೆದಿದ್ದು, ಎರಡೂ ಕಣ್ಣುಗಳನ್ನು ದಾನ ಮಾಡಿದ್ದಾರೆ.




