ಪ್ರಜಾಸ್ತ್ರ ಸುದ್ದಿ
ನವದೆಹಲಿ(New Delhi): ಸೋಮವಾರ ಸಂಜೆ ಕೆಂಪು ಕೋಟೆ ಹತ್ತಿರದ ಕಿಲ್ಲಾ ಮೆಟ್ರೋ ನಿಲ್ದಾಣದ ಗೇಟ್ ನಂಬರ್ 1ರಲ್ಲಿ ಸಂಭವಿಸಿದ ಕಾರು ಸ್ಫೋಟದಲ್ಲಿ ಮೃತಪಟ್ಟವರ ಸಂಖ್ಯೆ 12ಕ್ಕೆ ಏರಿಕೆಯಾಗಿದೆ. ಹಲವಾರು ಜನರು ಗಾಯಗೊಂಡಿದ್ದಾರೆ. ಇನ್ನು ಸ್ಫೋಟ ಪ್ರಕರಣದಲ್ಲಿ ಶಂಕಿತ ಚಾಲನೆ ಮಾಡುತ್ತಿದ್ದ ಕಾರಿನ ದೃಶ್ಯಗಳು ಇದೀಗ ವೈರಲ್ ಆಗಿವೆ. ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
ಸೋಮವಾರ ಸಂಜೆ ಸುಮಾರು 6.50ರ ವೇಳೆ ಹುಂಡೈ ಐ-20 ಕಾರು ಸ್ಫೋಟಗೊಂಡಿತು. ಇದರಿಂದ ಸುತ್ತಲಿನ ಅನೇಕ ಕಾರುಗಳು ಬೆಂಕಿಗೆ ಆಹುತಿಯಾದವು. ಸ್ಥಳದಲ್ಲಿ 8 ಜನರು ಮೃತಪಟ್ಟಿದ್ದರು. ಸಮಯ ಕಳೆದಂತೆ ಸಾವಿನ ಸಂಖ್ಯೆ ಏರಿಕೆ ಆಯಿತು. ಇದೀಗ ಸೆರೆ ಸಿಕ್ಕಿರುವ ದೃಶ್ಯದಲ್ಲಿರುವ ವ್ಯಕ್ತಿ ಪುಲ್ವಾಮಾ ನಿವಾಸಿ ವೈದ್ಯ ಉಮರ್ ಮೊಹಮ್ಮದ್ ಕಾರನ್ನು ಚಲಾಯಿಸುತ್ತಿದ್ದ ಎಂದು ಹೇಳಲಾಗುತ್ತಿದೆ.
ಫರಿದಾಬಾದ್ ನಲ್ಲಿ ಅಪಾರ ಪ್ರಮಾಣದ ಸ್ಫೋಟಕ ವಸ್ತುಗಳನ್ನು ವಶ ಪಡಿಸಿಕೊಳ್ಳಲಾಗಿತ್ತು. ಈ ವ್ಯಕ್ತಿಗೂ ಆ ಗುಂಪಿಗೂ ಸಂಬಂಧವಿರಬಹುದು ಎನ್ನಲಾಗುತ್ತಿದೆ. ಈ ಬಗ್ಗೆ ಸಾಕಷ್ಟು ತನಿಖೆ ನಡೆಯುತ್ತಿದೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ಉನ್ನತ ಮಟ್ಟದ ಅಧಿಕಾರಿಗಳ ಸಭೆ ನಡೆಸಿದ್ದಾರೆ. ತನಿಖಾ ಸಂಸ್ಥೆಗಳು ಪ್ರಕರಣದ ಆಳಕ್ಕೆ ಇಳಿದು ಶೋಧಿಸಲಿದೆ ಎಂದು ಭೂತಾನ ಪ್ರವಾಸದಲ್ಲಿರುವ ಪ್ರಧಾನಿ ಮೋದಿ ಹೇಳಿದ್ದಾರೆ.




