ಪ್ರಜಾಸ್ತ್ರ ಸುದ್ದಿ
ಬೆಂಗಳೂರು(Bengaloru): ರಾಜ್ಯ ಸರ್ಕಾರದ ಪ್ರಭಾವಿ ಸಚಿವರೊಬ್ಬರನ್ನು ಹನಿಟ್ರ್ಯಾಪ್ ಖೆಡ್ಡಾಗೆ ಬೀಳಿಸುವ ಪ್ಲಾನ್ ನಡೆದಿತ್ತು ಎನ್ನುವ ವಿಚಾರ ಕೇಳಿ ಬರುತ್ತಿದೆ. ಈ ಮೂಲಕ ಅವರನ್ನು ಕಟ್ಟಿ ಹಾಕುವ ಪ್ರಯತ್ನವನ್ನು ಮತ್ತೊಬ್ಬ ನಾಯಕರಿಂದ ನಡೆದಿದೆ ಅನ್ನೋ ಆರೋಪ ಕೇಳಿ ಬರುತ್ತಿದೆ. ಹನಿಟ್ರ್ಯಾಪ್ ಬಗ್ಗೆ ಅನುಮಾನ ಬಂದಿದ್ದರಿಂದ ಸಚಿವರು ಅವರಿಗೆ ಎಚ್ಚರಿಕೆ ಕೊಟ್ಟು ಕಳಿಸಿದ್ದಾರೆ ಎಂದು ಹೇಳಲಾಗುತ್ತಿದೆ.
ತುಮಕೂರು ಭಾಗದ ನಾಯಕರಿಗೆ ಈ ರೀತಿ ಮಾಡಲಾಗಿದೆ ಎನ್ನುವ ಆರೋಪ ಕೇಳಿ ಬಂದಿದೆ. ಹೀಗಾಗಿ ಸಚಿವರು, ಅವರ ಆಪ್ತರು ಮುಖ್ಯಮಂತ್ರಿ ಹಾಗೂ ವರಿಷ್ಠರಿಗೆ ದೂರು ನೀಡಿದ್ದಾರಂತೆ. ತಮ್ಮ ವಿರುದ್ಧ ಷಡ್ಯಂತ್ರ ರೂಪಿಸುವ ಮೂಲಕ ರಾಜಕೀಯವಾಗಿ ತಮ್ಮನ್ನು ಮುಗಿಸಲು ಸಂಚು ನಡೆದಿದೆ. ಇದನ್ನು ಯಾರು ಮಾಡಿದ್ದಾರೆ ಎನ್ನುವುದನ್ನು ತಿಳಿದುಕೊಂಡು ಅವರ ವಿರುದ್ಧ ರಾಜಕೀಯ ದಾಳ ಉರುಳಿಸುವ ಮುಂದಾಗಿದ್ದಾರೆ ಅಂತಾನೂ ಹೇಳಲಾಗುತ್ತಿದ್ದು, ಯಾರು ಆ ಸಚಿವರು? ಇವರಿಗೆ ಹನಿಟ್ರ್ಯಾಪ್ ಗೆ ಪ್ಲಾನ್ ಮಾಡಿದ್ಯಾರು ಅನ್ನೋದರ ಬಗ್ಗೆ ತಿಳಿದು ಬರಬೇಕಿದೆ.