ಕಾಂಗ್ರೆಸ್ ಪ್ರತಿಯೊಂದು ರಾಜ್ಯವನ್ನು ಹಾಳು ಮಾಡಿದೆ: ಪ್ರಧಾನಿ ಮೋದಿ

228

ಪ್ರಜಾಸ್ತ್ರ ಸುದ್ದಿ

ಭೋಪಾಲ್: ಕಾಂಗ್ರೆಸ್ ಗೆ ಅಧಿಕಾರ ನೀಡಿದ ಪ್ರತಿಯೊಂದು ರಾಜ್ಯವನ್ನು ಹಾಳು ಮಾಡಿದೆ. ಸ್ವತಂತ್ರ ನಂತರ ಮಧ್ಯಪ್ರದೇಶದಲ್ಲಿ ಸುದೀರ್ಘ ಆಡಳಿತ ನಡೆಸಿದ್ದು, ಈ ರಾಜ್ಯವನ್ನು ರೋಗಗ್ರಸ್ತ ಮಾಡಿದೆ. ನಾವು ಅಧಿಕಾರಕ್ಕೆ ಬಂದು ದುರಾಡಳಿತ ಕೊನೆಗಾಣಿಸಿದ್ದೇವೆ ಎಂದು ಪ್ರಧಾನಿ ಮೋದಿ ವಾಗ್ದಾಳಿ ನಡೆಸಿದರು.

ಕಾರ್ಯಕರ್ತರ ಮಹಾಕುಂಭ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದ ಅವರು, ಕಾಂಗ್ರೆಸ್ ಗೆ ಅಧಿಕಾರ ನೀಡಿದ ರಾಜ್ಯವನ್ನೆಲ್ಲ ಹಾಳು ಮಾಡಿದೆ. ಮಧ್ಯಪ್ರದೇಶ ದೇಶದ ಹೃದಯಭಾಗದಲ್ಲಿದ್ದು, ಪ್ರತಿ ಬಾರಿ ಬಿಜೆಪಿಯನ್ನು ಬೆಂಬಲಿಸಿದೆ. ಈ ಬಾರಿಯೂ ಬೆಂಬಲಿಸಲಿದೆ ಎಂದು ಹೇಳಿದರು.
error: Content is protected !!