ಪ್ರಜಾಸ್ತ್ರ ಸುದ್ದಿ
ಮುಂಬೈ(Mumbai): ಕಾಂಗ್ರೆಸ್ ಆಡಳಿತ ಇರುವ ರಾಜ್ಯಗಳು ರಾಯಲ್ ಫ್ಯಾಮಿಲಿಗೆ ಎಟಿಎಂ ಆಗಿ ಬದಲಾಗುತ್ತಿವೆ. ಮಹಾರಾಷ್ಟ್ರ ಚುನಾವಣೆಗೆ ಕರ್ನಾಟಕದಿಂದ 700 ಕೋಟಿ ರೂಪಾಯಿ ವಸೂಲಿ ಮಾಡಲಾಗಿದೆ ಎಂದು ಪ್ರಧಾನಿ ಮೋದಿ ಕಾಂಗ್ರೆಸ್ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ. ಶನಿವಾರ ಅಕೋಲಾದಲ್ಲಿ ಎನ್ ಡಿಎ ಅಭ್ಯರ್ಥಿಗಳ ಪರ ಪ್ರಚಾರ ನಡೆಸಿದ ವೇಳೆ, ಕರ್ನಾಟಕ, ತೆಲಂಗಾಣ, ಹಿಮಾಚಲ ಪ್ರದೇಶ ರಾಜ್ಯಗಳು ರಾಯಲ್ ಫ್ಯಾಮಿಲಿಯ ಎಟಿಎಂಗಳಾಗಿ ಬದಲಾಗುತ್ತಿವೆ ಎಂದಿದ್ದಾರೆ.
ಕರ್ನಾಟಕದಲ್ಲಿ ಮದ್ಯದಂಗಡಿಗಳ ಮಾಲೀಕರಿಂದ ಆ ಪಕ್ಷದವರು 700 ಕೋಟಿ ರೂಪಾಯಿ ವಸೂಲಿ ಮಾಡಿದ್ದಾರೆ. ಚುನಾವಣೆ ನಡೆಯುತ್ತಿರುವುದು ಮಹಾರಾಷ್ಟ್ರದಲ್ಲಿ ವಸೂಲಿ ದ್ವಿಗುಣವಾಗಿದ್ದು ಕರ್ನಾಟಕದಲ್ಲಿ. ಚುನಾವಣೆ ಹೆಸರಿನಲ್ಲಿ ಹಣ ಸೂಲಿಗೆ ಮಾಡಲಾಗುತ್ತಿದೆ ಎಂದು ಜನರು ಮಾತನಾಡಿಕೊಳ್ಳುತ್ತಿದ್ದಾರೆ ಅಂತಾ ಹೇಳಿದರು.