Ad imageAd image

ಬಿಎಸ್ವೈ ವಿರುದ್ಧದ ಪೋಕ್ಸೋ ಪ್ರಕರಣ ಇಂದು ವಿಚಾರಣೆ

Nagesh Talawar
ಬಿಎಸ್ವೈ ವಿರುದ್ಧದ ಪೋಕ್ಸೋ ಪ್ರಕರಣ ಇಂದು ವಿಚಾರಣೆ
WhatsApp Group Join Now
Telegram Group Join Now

ಪ್ರಜಾಸ್ತ್ರ ಸುದ್ದಿ

ಬೆಂಗಳೂರು(Bengaloru): ಬಿಜೆಪಿ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್ ಯಡಿಯೂರಪ್ಪ ವಿರುದ್ಧದ ಪೋಕ್ಸೋ ಪ್ರಕರಣದ ವಿಚಾರಣೆ ಬುಧವಾರ ನಡೆದಿದೆ. ತಮ್ಮ ವಿರುದ್ಧದ ಪ್ರಕರಣವನ್ನು ರದ್ದುಗೊಳಿಸಬೇಕು ಎಂದು ಅವರು ಅರ್ಜಿ ಸಲ್ಲಿಸಿದ್ದಾರೆ. ಶಾಸಕರು, ಸಂಸದರ ವಿರುದ್ಧದ ಕ್ರಿಮಿನಲ್ ಪ್ರಕರಣಗಳ ವಿಚಾರಣೆಯ ವಿಶೇಷ ನ್ಯಾಯಾಲಯದಲ್ಲಿ ಬುಧವಾರ ವಾದ ಪ್ರತಿವಾದ ನಡೆದಿದೆ. ಬಾಲಕಿಯ ಮೇಲೆ ಅತ್ಯಾಚಾರವಾಗಿದೆಯೊ ಇಲ್ಲವೊ ಎಂದು ಚಕ್ ಮಾಡಲು ಶರ್ಟ್ ಒಳಗೆ ಕೈ ಹಾಕಿದ್ದೆ ಎಂದು ಯಡಿಯೂರಪ್ಪನವರೆ ಹೇಳಿದ್ದಾರೆ. ಹೀಗಾಗಿ ಇಲ್ಲಿ ಲೈಂಗಿಕ ದೌರ್ಜನ್ಯ ನಡೆದಿದೆ. ಅವರ ಅರ್ಜಿ ವಜಾಗೊಳಿಸಬೇಕೆಂದು ಪ್ರಾಸಿಕ್ಯೂಟರ್ ರವಿವರ್ಮ ಕುಮಾರ್ ವಾದ ಮಂಡಿಸಿದರು.

ಬಿಎಸ್ವೈ ಪರ ವಾದ ಮಾಡಿದ ಸಿ.ವಿ ನಾಗೇಶ್, ಒಂದೂವರೆ ತಿಂಗಳ ನಂತರ ದೂರು ದಾಖಲಿಸಿದ್ದಾರೆ. ದೂರುದಾರ ಮಹಿಳೆ ಈಗ ಬದುಕಿಲ್ಲ. ಅಸಭ್ಯವಾಗಿ ವರ್ತಿಸಿದರು ಎಂದು ಇಲ್ಲಿ ಬಾಲಕಿ ಹೇಳಿಕೆಯಿದೆ. ಹಲವು ಜನರ ಎದುರು ಈ ರೀತಿ ವರ್ತಿಸಲು ಸಾಧ್ಯವೇ ಎಂದು ಪ್ರಶ್ನಿಸಿದರು. ಆಗ ನ್ಯಾಯಾಧೀಶರಾದ ನಾಗಪ್ರಸನ್ನ ಅವರು, ಬಾಲಕಿಯ 164ರ ಹೇಳಿಕೆಯನ್ನು ಪರಿಗಣಿಸಬೇಕಲ್ಲವೇ ಎಂದು ಕೇಳಿದರು. ಇದಕ್ಕೆ ಸಿ.ವಿ ನಾಗೇಶ್ ಅವರು ಉತ್ತರಿಸುತ್ತಾ ಮತ್ತಷ್ಟು ವಿಚಾರಗಳನ್ನು ಕೋರ್ಟ್ ಗಮನಕ್ಕೆ ತರುವ ಪ್ರಯತ್ನ ಮಾಡಿದರು.

ಯಡಿಯೂರಪ್ಪನವರಿಗೆ 82 ವರ್ಷ ಆಗಿದೆ. ಕೈ ನಡಗುತ್ತೆ. ಲೈಟ್ ಸ್ವಿಚ್ ಹಾಕಲು ನಮಗೆ ಹೇಳುತ್ತಾರೆ ಎಂದು ಕೆಲಸದವರು ಹೇಳುತ್ತಾರೆ. ಅವರ ಅಂಗರಕ್ಷಕರು ಆಜುಬಾಜು ಇರುತ್ತಾರೆ. ಹಾಲ್ ಬಿಟ್ಟು ಅವರು ಎಲ್ಲಿಯೂ ಹೋಗಿಲ್ಲ ಎನ್ನುತ್ತಾರೆ. ಬಾಲಕಿ ಹೇಳಿಕೆ ಆಧರಿಸಿ ತನಿಖಾಧಿಕಾರಿಗಳು ದೋಷಾರೋಪ ಪಟ್ಟಿ ದಾಖಲಿಸಿದ್ದಾರೆ. ಮೃತಪಟ್ಟಿರುವ ದೂರುದಾರ ಮಹಿಳೆ ಪ್ರಕರಣ ದಾಖಲಿಸುವ ಮುನ್ನ ರಾಜಕಾರಣಿಯೊಬ್ಬರನ್ನು ಭೇಟಿಯಾಗಿ ಠಾಣೆಗೆ ಹೋಗಿದ್ದರು ಎಂದು ಹೇಳುತ್ತಾ, ದೋಷಾರೋಪ ಪಟ್ಟಿಯಲ್ಲಿನ ಮತ್ತಷ್ಟು ಅಂಶಗಳನ್ನು ಓದಲು ಮುಂದಾದಾಗ ನ್ಯಾಯಾಧೀಶರು, ಬೇರೆ ಪ್ರಕರಣಗಳಿಗೆ ಈಗ ಅವಕಾಶ ಕೊಡೋಣ. ನಾಳೆ ನಿಮ್ಮ ಪ್ರಕರಣ ನೋಡೋಣ ಎಂದು ಹೇಳಿ ಗುರುವಾರಕ್ಕೆ ಮುಂದೂಡಿದರು.

WhatsApp Group Join Now
Telegram Group Join Now
Share This Article