ಪ್ರಜಾಸ್ತ್ರ ಸುದ್ದಿ
ಬೆಂಗಳೂರು(Bengaloru): ಬಿಜೆಪಿ ಮಾಜಿ ಸಿಎಂ, ಸಂಸದೀಯ ಮಂಡಳಿ ಸದಸ್ಯ ಬಿ.ಎಸ್ ಯಡಿಯೂರಪ್ಪ ವಿರುದ್ಧದ ಪೋಕ್ಸೋ ಪ್ರಕರಣದ ವಿಚಾರಣೆ ಇಂದು ಹೈಕೋರ್ಟ್ ನಲ್ಲಿ ನಡೆಯಿತು. ಬಿಎಸ್ವೈ ಪರ ವಕೀಲರ ವಾದಕ್ಕೆ ಜನವರಿ 17ರಂದು ಸಮಯ ನಿಗದಿ ಮಾಡಿದ ನ್ಯಾಯಾಧೀಶರು, ಯಡಿಯೂರಪ್ಪ ಖುದ್ದು ಹಾಜರಾತಿ ವಿನಾಯ್ತಿಯನ್ನು ವಿಸ್ತರಣೆ ಮಾಡಿದರು. ಹೀಗಾಗಿ ಬಿಎಸ್ವೈಗೆ ರಿಲೀಫ್ ಸಿಕ್ಕಂತಾಗಿದೆ.
ಪ್ರಾಸಿಕ್ಯೂಷನ್ ಪರ ಎಸ್ ಪಿಪಿ ರವಿವರ್ಮಾ ವಾದ ಮಂಡಿಸಿದರು. ಬಾಲಕಿ ಹೇಳಿಕೆ ಆಧರಿಸಿ ವಾದ ಶುರು ಮಾಡಿದರು. ಕೇಸ್ ನಡೆದಾಗ ನಿನಗೆ ಎಷ್ಟು ವಯಸ್ಸು ಎಂದರು. ಆರೂವರೆ ವರ್ಷ. ಮುಂದೆ ಅಸಭ್ಯವಾಗಿ ವರ್ತಿಸಿದರು ಎಂದು ಹೇಳಿದರು. ಮುಂದೆ ಬರೆದಿರುವ ಸಾಲುಗಳನ್ನು ಓದಬಾರದು ಎಂದು ನ್ಯಾಯಾಧೀಶರು ಹೇಳಿದ್ದರಿಂದ ವಕೀಲರು ಅದನ್ನು ಓದಲಿಲ್ಲ. ಅಂದು ಯಡಿಯೂರಪ್ಪ 9 ಸಾವಿರ ರೂಪಾಯಿ ನೀಡಿದ್ದು, 2 ಲಕ್ಷ ರೂಪಾಯಿ ನೀಡಿರುವ ವಿಚಾರ ಪ್ರಸ್ತಾಪಿಸಿದರು. ಆಕೆಗೆ ಸಮಸ್ಯೆ ಇದ್ದಿದ್ದರಿಂದ ಸಾಲದ ರೂಪದಲ್ಲಿ ಹಣ ಕೊಡಲು ಹೇಳಿದ್ದೆ ಎಂದು ಬಿಎಸ್ವೈ ಒಪ್ಪಿಕೊಂಡಿದ್ದಾರೆ. ಚೆಕ್ ಮಾಡಿದೆ ಎಂದು ಬಿಎಸ್ವೈ ಒಪ್ಪಿಕೊಂಡಿದ್ದಾರೆ. ಏನು ಚೆಕ್ ಮಾಡಿದರು ಅನ್ನೋದು ಅವಿಡೆನ್ಸ್ ವೇಳೆ ತಿಳಿಯಬೇಕಿದೆ ಎಸ್ ಪಿಪಿ ಹೇಳಿದ್ದಾರೆ.