ಪ್ರಜಾಸ್ತ್ರ ಸುದ್ದಿ
ಹೈದ್ರಾಬಾದ್(Hyderabad): ಆಂಧ್ರಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಹಾಗೂ ಅವರ ಮಗ ನಾರಾ ಲೋಕೇಶ್ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣದಲ್ಲಿ ಅವಹೇಳನಕಾರಿ ಪೋಸ್ಟ್ ಹಾಕಿದ ಸಂಬಂಧ ನಿರ್ದೇಶಕ ರಾಮ್ ಗೋಪಾಲ್ ವರ್ಮಾ(RGV) ವಿರುದ್ಧ ಪ್ರಕರಣ ದಾಖಲಾಗಿದೆ. ಹೀಗಾಗಿ ಅವರನ್ನು ಪೊಲೀಸರು ಹುಡುಕಾಟ ನಡೆಸಿದ್ದಾರೆ.
ಸಿಎಂ ಹಾಗೂ ಮಗನಿಗೆ ಸಂಬಂಧಿಸಿದ ತಿರುಚಿದ ಫೋಟೋಗಳನ್ನು ಹಂಚಿಕೊಂಡು ಅವಹೇಳನಕಾರಿಯಾಗಿ ಪೋಸ್ಟ್ ಮಾಡಿರುವ ಸಂಬಂಧ, ನವೆಂಬರ್ 11ರಂದು ಪ್ರಕಾಶಂ ಜಿಲ್ಲೆಯ ಮಡ್ಡಿಪಾಡು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ನವೆಂಬರ್ 24ರಂದು ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ಹೊರಡಿಸಲಾಗಿತ್ತು. ಆದ್ರೆ, ರಾಮ್ ಗೋಪಾಲ್ ವರ್ಮಾ ನಾಪತ್ತೆಯಾಗಿದ್ದಾರೆ. ಹೀಗಾಗಿ ಅವರನ್ನು ಹುಡುಕಾಟ(Look Out) ನಡೆಸಲಾಗುತ್ತಿದೆ.
ಆಂಧ್ರ ಪೊಲೀಸರು ಮೂರು ತಂಡಗಳನ್ನು ರಚಿಸಿದ್ದಾರೆ. ಒಂದು ತಂಡ ತಮಿಳುನಾಡಿನ ಚೆನ್ನೈಗೆ ತೆರಳಿದೆ. ಎರಡು ತಿಂಡಗಳು ಹೈದ್ರಾಬಾದ್ ನಲ್ಲಿರುವ ಫಿಲ್ಮ್ ನಗರದಲ್ಲಿ ಹುಡುಕಾಟ ನಡೆಸಿದೆ. ಹೇಳಿಕೆಯಿಂದಾಗಿ, ಸಿನಿಮಾಗಳಿಂದಾಗಿ ಅಥವ ಇನ್ಯಾವುದೋ ಕಾರಣದಿಂದಾದರೂ ಒಂದಲ್ಲ ಒಂದು ವಿವಾದ(Controversy) ಮಾಡಿಕೊಳ್ಳುವುದು ನಿರ್ದೇಶಕ ರಾಮ್ ಗೋಪಾಲ್ ವರ್ಮಾ(ram gopal varma)ಕಾಮನ್ ಆಗಿದೆ. ಆಂಧ್ರ ಸಿಎಂ ಹಾಗೂ ಕುಟುಂಬದ ವಿರುದ್ಧದ ಅವಹೇಳನಕಾರಿ ಪೋಸ್ಟ್ ವಿರುದ್ಧ ಕಾನೂನು ಅಸ್ತ್ರ ಪ್ರಯೋಗವಾಗಿದೆ.