ಪ್ರಜಾಸ್ತ್ರ ಸುದ್ದಿ
ಗಾಜಿಯಾಬಾದ್(Ghaziabad): ಉತ್ತರ ಪ್ರದೇಶದ ಸಂಭಲ್(Sambhal) ನಲ್ಲಿ ಉಂಟಾಗಿರುವ ಸಂಘರ್ಷಕ್ಕೆ ಸಂಬಂಧಿಸಿದಂತೆ ಲೋಕಸಭೆ ನಾಯಕ ರಾಹುಲ್ ಗಾಂಧಿ ನೇತೃತ್ವದ ತಂಡ ಬುಧವಾರ ಸ್ಥಳಕ್ಕೆ ಭೇಟಿ ನೀಡಲು ಹೊರಟ್ಟಿತ್ತು. ಆದರೆ, ಇವರನ್ನು ಪೊಲೀಸರು ಗಾಜಿಪುರ ಗಡಿಯಲ್ಲಿ ತಡೆದಿದ್ದಾರೆ. ಈ ಬಗ್ಗೆ ಮಾತನಾಡಿರುವ ರಾಹುಲ್ ಗಾಂಧಿ, ನಾನು ಲೋಕಸಭೆ ನಾಯಕನಾಗಿ ಸಂಭಲ್ ಗೆ ಭೇಟಿ ನೀಡುವುದು ನನ್ನ ಹಕ್ಕು. ಆದರೆ, ಪೊಲೀಸರು ಇದಕ್ಕೆ ಅವಕಾಶ ನೀಡುತ್ತಿಲ್ಲವೆಂದು ಕಿಡಿ ಕಾರಿದರು.
ಕೆಲವು ದಿನಗಳ ಬಳಿಕ ಭೇಟಿಗೆ ಅವಕಾಶ ನೀಡುವುದಾಗಿ ಹೇಳುತ್ತಾರೆ. ನಾನು ಒಬ್ಬನೆ ಪೊಲೀಸರೊಂದಿಗೆ ಬರುತ್ತೇನೆ ಎಂದರೂ ಬಿಡುತ್ತಿಲ್ಲ. ಸಂಭಲ್ ಜನರನ್ನು ಭೇಟಿಯಾಗಿ ಏನಾಗಿದೆ ಎನ್ನುವುದು ತಿಳಿದುಕೊಳ್ಳಲು ಬಯಸುತ್ತಿದ್ದೇನೆ. ಇದು ಹೊಸ ಹಿಂದೂಸ್ಥಾನ್ ಆಗಿದೆ. ಇಲ್ಲಿ ಅಂಬೇಡ್ಕರ್ ಅವರ ಸಂವಿಧಾನ ಮುಗಿಸಲು ಪ್ರಯತ್ನಿಸಲಾಗುತ್ತಿದೆ ಎಂದು ವಾಗ್ದಾಳಿ ನಡೆಸಿದರು. ವಯನಾಡು ಲೋಕಸಭೆ ಸದಸ್ಯ ಪ್ರಿಯಾಂಕಾ ಗಾಂಧಿ ವಾದ್ರಾ ಸೇರಿ ಕಾಂಗ್ರೆಸ್ ನಿಯೋಗದೊಂದಿಗೆ ತೆರಳುತ್ತಿದ್ದರು.