ಯುಕೆ ನಿವಾಸಿಯಾಗಿರುವ ವಿಜಯಪುರ ಜಿಲ್ಲೆ ದೇವರ ಹಿಪ್ಪರಗಿ ತಾಲೂಕಿನ ಕೊಂಡಗೂಳಿ ಗ್ರಾಮದ ಬಸವ ಪಾಟೀಲ ಅವರು ಬರೆದ ಲೇಖನವಿದು.
ಸಮಾಜಿಕ ಜಾಲತಾಣಗಳಲ್ಲಿ ಹರಿದಾಡುವ ಸುದ್ದಿಗಳಿಂದ ದೂರವಾಗಿ, ವೈಯಕ್ತಿಕ, ಕೌಟುಂಬಿಕ ಮತ್ತು ಕಾಯಕದ ಅಭಿವೃದ್ಧಿಯೆಡೆಗೆ ಮನಸ್ಸು ಹಾತೊರೆಯುತ್ತಿದೆ. ಹಾಗಾಗಿ ಪ್ರಾಶಸ್ತ್ಯಗಳು ಬದಲಾಗಿವೆ. ಜೀವನ ಹರಿಯುವ ನದಿ. ಅದರ ಮಾರ್ಗ ನಿಸರ್ಗದತ್ತವಾದರೂ ಘನತೆಯಿಂದ ಹರಿಯುವ ಭಾವ. ರಾಜಕಾರಣ, ನನಗೆ ವ್ಯಕ್ತಿಪ್ರತಿಷ್ಟೆ ಅಥವಾ ಯಾವುದೊ ಶ್ರೇಷ್ಟತೆಯ ವ್ಯಸನ ಅಂತಾನು ಇಲ್ಲ. ಅದು ವೈಚಾರಿಕ ಅನುಸಂಧಾನ ಮತ್ತು ಮೌಲ್ಯಯುತ ಸಮಸಮಾಜದ ಕನಸಿನ ಕಸುವು ಅಷ್ಟೆ. ಅದಕ್ಕ ಮ್ಯಾಗು ಇಲ್ಲ ಕೆಳಗು ಇಲ್ಲ. ಅತಿ ಸಣ್ಣ ವಯಸ್ಸಿನಲ್ಲಿಯೆ ರಾಜಕಾರಣದ ಪಡಸಾಲೆಗಳಲ್ಲಿ “ಹೊಂಬ ಗೌಡ” ಅಥವಾ “ಅಹಂಕಾರಿ ಯುವಕ” ಅಥವಾ, “ದಾಸೋಹಿ”ಯಾಗಿ, ತಿರಗಾಡಿದ್ದೇನೆ. ನೋಡಿದ್ದೇನೆ ಮತ್ತು ಕಲಿತಿದ್ದೇನೆ. ಹಾಗಾಗಿ ನನಗೆ “political association and disassociation” ಹಾಗೆ “political attachment and ditachment“ ಅರ್ಥೈಸಿಕೊಂಡಿದ್ದೇನೆ. ರಾಜಕಾರಣ ನೀಡುವ “ಹುಸಿ ಧೈರ್ಯ” ಮತ್ತು “ಹಸಿ ಸ್ವಾತಂತ್ರ್ಯ”ದ ಅನುಭವ ಮತ್ತು ಅನುಭಾವ ಇದೆ. ಹಂಗೆ ರಾಜಕಾರಣದ ನೈತಿಕ ಪ್ರಜ್ಞೆ ಇದೆ.
ಅಂತಹ ನೈತಿಕ ಪ್ರಜ್ಞೆಯನ್ನ ನಮ್ಮ ಕಾಕಾ ಶರಣ ರಮಜಾನ್ ದರ್ಗಾ ಅವರು, “ಬಸವ/ಲಿಂಗಾಯತ ಪ್ರಜ್ಞೆ” ಅಂತ ಅರ್ಥೈಸಿ, ಈಗಿನ ಸೋ ಕಾಲ್ಡ್ ಲಿಂಗಾಯತ ರಾಜಕಾರಣಿಗಳಲ್ಲಿ ಅದು ಇಲ್ಲ! ಅಂಥ ನೋವಿನಿಂದ ಹೇಳತಾ ಇರತಾರೆ, “ಲಿಂಗಾಯತ ಯುವಕರ ಸಂಘಿಗಳ ಗಾಳಕ್ಕ ಬಿದ್ದು, ಅವರ ಕೋಮುವಾದದ ಕುದುರೆ”ಯಾದರು ಅಂತ ಹಳಹಳಿಸ್ತಾರೆ. ಅದರ ದೃಷ್ಟಾಂತವೆ 10 ವರ್ಷಗಳ ಸಂಘಿಗಳ ಕರ್ನಾಟಕ ಭಾಜಪಾದ ಅಹಂಕಾರ. ಹೈದು, ಲಿಂಗಾಯತ ಎನ್ನುವ ಕುದರೆಯ ತಡಿ ಏರಿದ್ದು, ಸಂಘ. ಈ ಸಂಘ, “ಹಿಂದು ನಾವೆಲ್ಲ ಒಂದು” ಎನ್ನುವ ಹಸಿ ಸುಳ್ಳನ್ನ ಅರಿಯದ ಲಿಂಗಾಯತ (100+ಕಾಯಕ ಪಂಗಡಗಳು) ಕೋಮುವಾದವನ್ನ ಬೆನ್ನ ಮೇಲೆರಿಸಿಕೊಂಡಿದ್ದು ಅತಿ ನೋವೀನ ಸಂಗತಿ. ಅದಕ್ಕ ಸಾಥ್ ಕೊಟ್ಟ “ಎನ್ವೆಲೋಪ್ ಸ್ವಾಮಿಗಳು” ಮತ್ತು “ಜಾತಿ ಶ್ರೇಷ್ಟತೆಯ ವ್ಯಸನ”.

1983 ರಲ್ಲಿ ಹುಟ್ಟಿದ ಪಕ್ಷ ಅದರ ಹಿಂದಿನ “ಹುಸಿ ಸಂಘ”, ನಿಮ್ಮ ಮುತ್ಯಾ ವಜ್ರ ವೈಢೋರ್ಯವಂತ ಆಗಿದ್ದ! ನೀನು ಹಿಂದುಳಿಯಲಿಕ್ಕೆ ಮುಸಲ್ಮಾನರು ಕಾರಣ ಅಂತ ಹೇಳಿದಾಗ, ಲಿಂಗಾಯತ ಹುಡುಗ/ಗಿ ನಮ್ಮ ಮುತ್ಯಾ ಸ್ವಾತಂತ್ರ ಚಳುವಳಿಯ ಭಾಗವಾಗಿದ್ದ, ನೀವು ಯಾವ ಚಳುವಳಿಯ ಭಾಗವಾಗಿದ್ದೀರಿ, “ಸಂಘಿ ಭಾಜಪಾ” ಉತ್ತರಿಸು ಅಂತ ಕೇಳತಾನೆ ಇಲ್ಲ, ಕರ್ನಾಟಕದಲ್ಲಿ ಭಾಜಪ ಕಟ್ಟಿದ ಲಿಂಗಾಯತ, ಸಂಘಿ ಕಂಡ ಕೂಡಲೆ ಜೀ ಅನ್ನುವ ದೈನೇಸಿ ಸ್ಥಿಥಿ ಯಾಕೆ ಬಂದರು? 33 ಪ್ರತಿಶತ ಮತಗಳನ್ನ ತಂದಾಂವನ ಕೆಳಗ ಯಾಕ ಇಳಿಸಿದರು? ಲಿಂಗಾಯತರು “ಹಿಂದೂ ಹುಲಿಗಳು” ಯಾಕೆ ಹವಣಿಸುತಿದ್ದಾರೆ? “ಲಿಂಗಾಯತ ಶರಣ ಶರಣೆಯರು” ಆಗಲಕ್ಕ ಯಾಕ ಇಷ್ಟ ಪಡ್ತಾ ಇಲ್ಲಾ?
ಲಿಂಗಾಯತ ಧರ್ಮದಲ್ಲಿ, ಇರಲಾರದಂತದ್ದು ಹಿಂದು ಧರ್ಮದಲ್ಲಿ ಏನಿದೆ?
ದೇವರಾ? – ಜಗದಗಲ ಮುಗಿಲಗಲ! ಶ್ರೇಷ್ಟತೆಯಾ? – ಅಪ್ಪನು ಮಾದಾರಾ ಚೆನ್ನಯ್ಯ, ಬೊಪ್ಪನ ಡೋಹಾರ ಕಕ್ಕಯ್ಯ ಕರ್ಮ ನಾ? – ಮೇಲಿಲ್ಲ ಸ್ವರ್ಗ, ಕೆಳಗಿಲ್ಲ ನರಕ ಸನಾತನ/ಭಾಳ ಹಳಿದಾ? – ಸಂಸ್ಕೃತಕ ಲಿಪಿನೆ ಇಲ್ಲ, ಕನ್ನಡ ಸತ್ಯ ಮತ್ತು ನಿತ್ಯ ಇತಿಹಾಸನಾ? – ಪುರಾಣ ಪುಂಡರ ಗೋಷ್ಟಿ ದ್ವಂದ್ವತಾನ? – ತಮಗೊಂದು ಬಟ್ಟೆ, ಶಾಸ್ತ್ರಕೊಂದು ಬಟ್ಟೆ (ಬಟ್ಟೆ=ದಾರಿ) ಅವರ ಅಜೆಂಡಾ ಏನೈತಿ ಅಂತ ಕೇಳರಿ ಒಮ್ಮೆ, ನಿಮ್ಮನ್ನ ಹಿಂದೂ ಹುಲಿಗಳನ್ನಾಗಿ ಯಾಕ ಮಾಡಲಕ್ಕತ್ತಾರಾ? ನಿಮ್ಮ ವಿವೇಕವನ್ನ ಕದಿಬೇಕಂತಾ? ಒಂದು ಗ್ರಾಮ ಪಂಚಾಯತ ಚುಣಾವಣೆಯ ಗೆದಿಯದಂವ, ಕರ್ನಾಟಕದ ಉಸ್ತುವಾರಿಕೊಟ್ಟು, ನಿಮ್ಮನ್ನ ರಾಜಕಾರಣದ ದಾಳವಾಗಿಸಿದ “ಸಂಘಿ ತತ್ವಕ್ಕ” ಪ್ರಶ್ನೆ ಯಾಕ ಕೇಳಲ್ಲ? ನಾವು ನೀವು ಸ್ವತಂತ್ರ ಧರ್ಮದ ಮಾನ್ಯತೆ ಕೇಳಿದರ, ನಮ್ಮೊಳಗ ಜಗಳ ಹಚ್ಚಿದರು. ನಮ್ಮ ವಿಚಾರದೋಳಗ ಇಬ್ಬರನ ನಿರ್ಮಾಣ ಮಾಡಿ ನಮಗೆ “ಪಕ್ಷಗಳ” ಚೌಕಟ್ಟಿನೋಳಗ ಕುಂದಿರಿಸಿದರು. ಅಹ್ವಾನ ಕೊಟ್ಟರು ಚರ್ಚೆಗೆ ಬರಲಿಲ್ಲ, ಆದರೂ ನಾವು ನಾವೆ ರಾತ್ರೋರಾತ್ರಿ “ಲಿಂಗಾಯತರು ಮತ್ತು ವೀರಶೈವರು” ಆದವಿ! “ಕಾಂಗ್ರೇಸ್/ಭಾಜಪಾ” ಮಾಡಿದರು. ಮಾಡಿದವರು, ಮಾಡಿಸಿದವರು ಚರ್ಚೆಯ ಭಾಗವೆ ಆಗಲಿಲ್ಲ! ಮುಂದ ಬರಿಸಿದರು ವಚನ ದರ್ಶನ, ಯಾರೂ ಓದಂಗಿಲ್ಲ, ಆದರೂ “ಇಭತ್ತಿ ಹಚ್ಚಕೋಬೇಕಾದ ಸ್ವಾಮಿಗಿ” ಗುಂಡಕ ಕುಂಕಮ ಹಚ್ಚಿ, ಯಾರೊಬ್ಬರ ಹಣಿಮ್ಯಾಲ ಇಬತ್ತಿ ಇರಲಾರದೆ, ಸಂಘಿ ಕಾರ್ಯಕ್ರಮ ಮಾಡಿ ಕರ್ನಾಟಕ ತುಂಬಾ ಪ್ರಚಾರ ಮಾಡಿದರು. ಆಗ ಒಬ್ಬ ರಾಜಕಾರಣಿ ಶರಣ ಎಮ್.ಬಿ ಪಾಟೀಲ ಸಿಡಿದೆದ್ದ, ಪ್ರಶ್ನೆ ಕೇಳದರು ಗಟ್ಟಿ ಧ್ವನಿಯಲ್ಲಿ, “ನಮ್ಮ ಅಸ್ಮಿತೆಗೆ ಧಕ್ಕೆ” ಬಂದರ ನಾವು ಉತ್ತರ ಕೊಟ್ಟೆ ಕೊಡತಿವಿ, ಗೌರಯುತವಾಗಿ ಮತ್ತು ಐತಿಹಾಸಿಕವಾಗಿ ಅಂತ, ಅದನ್ನ ಕಾರ್ಯರೂಪಕ್ಕ ತಂದಿದ್ದು, ಜಾಗತಿಕ ಲಿಂಗಾಯತ ಮಹಾಸಭಾ, “ವಚನ ದರ್ಶನ-ಮಿಥ್ಯ vs ಸಥ್ಯ” ಯಾವುದರೆ ದಾರದ ಮಾಧ್ಯಮ ಬರಿತಾ? ಅಲ್ಲಿ ವೀರಶೈವ ಮಹಾಸಾಭಾದವರೆ ಬಂದಿದ್ದರಲ್ಲ!
ಅದಕ್ಕ “ಲಿಂಗಾಯತ ಪ್ರಜ್ಞೆ” ವ್ಯಾಪಕವಾಗಲಿ, “ಸಮ ಸಮಾಜದ ಅರಿವು” ಶಾಸ್ವತವಾಗಲಿ. ಹಿಂದೂ ಹುಲಿಗಳು “ಶರಣ ಶರಣೆಯರಾಗಲಿ” ಅದರ ಭಾಗವಾಗಿಯೆ, ವಿಜಯಪುರದ ನಗರದ ಚುನಾಯಿತ ಶಾಸಕನ ಪಕ್ಷದ ಉಚ್ಛಾಟನೆ ಕ್ರಮ ಸರಿ ಅಲ್ಲ, ಅದು ಹಿಂದು ಹುಲಿಗಳಿಗೆ ಬಿಟ್ಟಿದ್ದು, ನಮ್ಮ ಲಿಂಗಾಯತ ಶರಣ ಶರಣೆಯರಲ್ಲಿ, “ಬಸವ ಪ್ರಜ್ನೆ ಜಾಗೃತ”ವಾಗಲಿ, ಬನಾಯೆಂಗೆ ಮಂದಿರ ಅನ್ನು ಹಾಡಿಗಿ ಡ್ಯಾನ್ಸ್ ಹೊಡಿದು ಬಿಟ್ಟು. ಕಟ್ಟುತ್ತೇವ, ಕಟ್ಟುತ್ತೇವ ಕಟ್ಟೆ ಕಟ್ಟತೇವ, ಒಡೆದ ಮನಸ್ಸುಗಳ, ಕಂಡ ಕನಸುಗಳ ಕಟ್ಟುತೇವ…
ಶರಣು ಶರಣಾರ್ಥಿ
ಬಸವ #ಕೊಂಡಗೂಳಿಯಂವ