ವಿಶೇಷ ಲೇಖನ: ಬಸವ ಪಾಟೀಲ ಕೊಂಡಗೂಳಿ, ಲಂಡನ್
ಧೃವೀಕರಣದ ಆರ್ಥಿಕತೆ ಸಂಘಕ್ಕ ಭಾಳ ಚೋಲೊ ಗೊತ್ತಾಯಿತಿ. ಅದಕ್ಕ ಅವರು ಸಾಂಸ್ಕೃತಿಕ ಧೃವೀಕರಣ ಮಾಡಿದರು. ಬಹುತೇಕ ನಂಬಿಕೆ ಆಧಾರಿತ, ಅದಕ್ಕ ‘’ಅಪೀಲಿಂಗ’’ ಮೌಲ್ಯ ಆಯಿತಿ. ಭಾವನಿಷ್ಚ ದೇಶದೊಳಗ ಇತ್ತೀಚೆಗೆ ಅದು ಜಾಗತೀಕವಾಗಲಕ್ಕತ್ತದ. ಮತ್ತ ವ್ಯಾಪಕವಾಗಿ ಬೆಳಿಲಿಕತ್ತದ. ಅಲ್ಲಿ ಪ್ರತಿರೋಧ “ದ್ರೋಹ’’ ಆಗಿ ಮಾರ್ಪಡತದ. ಅದಕ್ಕ ಕೆಲವೆ ಕೆಲವು ಶಕ್ತಿಗಳಿಗೆ ದೊಡ್ಡ ಮಾರ್ಕೇಟ್ ಬೇಕು. ಕನ್ಸೂಮರಿಸಿಮ್ ನಿರ್ಮಾಣ ಮಾಡಬೇಕು ಅದಕ್ಕ ತಕ್ಕಂಗ ಘೋಷಣೆ ಮನೆ ಮನ ಮುಟ್ಟಲ್ಲಕ್ಕ ಮಾಧ್ಯಮ ತಯ್ಯಾರಿ ಮಾಡಕೊಂಡ ಬಗ್ಗೆ ಸಿಕ್ಕಾಪಟ್ಟಿ ಚಿಂತನೆಗೆ ಈಡಮಾಡಬೇಕು. ಆದರೂ ಅದಕ್ಕ ಗೊತ್ತಾದ ಹ್ಯಾಂಗ ಚಾವಿ ತೀರವಬೇಕು ಅಂತ ಕೊನೆಯ ಪಕ್ಷ ಡಿಜಿಟಲ್ ಕನೆಕ್ಟೆಡ್ ಜಗತ್ತ/ವಿಶ್ವಮಾನವ ಆಗಬೇಕಾಗಿದ್ದು, ಹೈಪರ್ ಲೋಕಲ್/ಮತ್ತ ನಂಬಿಕೆಯ ಬಬಲ್ ಆಗಿ ಸೃಷ್ಟಿಯಾಗಿದ್ದು, ಕೆಟ್ಟ ಅನ್ನಸ್ತಾದ. ಉದಾಹರಣೆಗೆ ನನಗ ಬರುವ ಮಾಹಿತಿ/ಇನ್ಫೋಟೈನಮೆಂಟ್/ಮನರಂಜನೆಯ ಸಲಹೆಗಳಲ್ಲ ನಾನು ನಂಬಿದ ವಿಚಾರಗಳ ಸುತ್ತಮುತ್ತ, ನಮ್ಮೂರಿನ ಸುದ್ದಿ, ನಮ್ಮ ನಾಡಿನ ಸುದ್ದಿ, ನಮ್ಮ ದೇಶದ ಸುದ್ದಿ ಬರಿ ಇವೆ. ನಾನು ಚೆಂದಾದಾರ ಆಗದೆ ಇದ್ದರು! ಹ್ಯಾಂಗ ಈ ಮಾರ್ಕೇಟಿಗಿ ಲಾಭ? ನನ್ನ ಮಾಹಿತಿ ಕುರುಹಿನ ಮಾಹಿತಿ, ಸಮಾಜಿಕ ಮಾಹಿತಿ, ಖಾಸಗಿ ಮಾಹಿತಿ ಅಕ್ಷರ, ಚಿತ್ರ ಮತ್ತು ದೃಷ್ಯಗಳ ಮಾಹಿತಿ.
ಈ ಮಾಹಿತಿಯುಗ ಬರುಕಿನ್ನ ಮೊದಲ ಬಂಗಾರ ಬೆಳ್ಳಿಕಿನ್ನ ಶ್ರೀಮಂತ ಎಣ್ಣಿ-ಘಾಸ್ಲೇಟ, ಪೆಟ್ರೋಲ್, ಡಿಸೇಲ್ ಈಗು ಆಯಿತಿ, ಆದರ ಈಗ ಭಾಳ ಬೆಲೆಯುಳ್ಳದ್ದು ಮಾಹಿತಿ ಇದರ ಖರೀದಿದಾರರು ಯಾರು? 1.ಕಾರ್ಪೋರೆಟ್ ಕಂಪನಿಗಳು, 2.ಸರ್ಕಾರಗಳು. ಇವೆರಡು ಸಂಸ್ಥೆಗಳು ಏನ ಮಾಡತಾವ? “ಕನ್ಸೂಮರಿಸಿಮ್’’ ಹ್ಯಾಂಗ ನೀವು ಕೊಟ್ಟ ಮಾಹಿತಿ ಮ್ಯಾಲ ನಿಮ್ಮಲ್ಲಿ ಒಂದು ಸೆಳೆತಾ ಹುಟ್ಟಸ್ತಾರ. ಸರಿಯಪಾ ನಾವು ನಂಬಿದ್ದ ನಮಗ ಮಾರಲಕ್ಕತ್ತಾರ ಕೊಳ್ಳಲಾಕ ಪ್ರೇರೆಪಿಸ್ತಾರ ಅದರಾಗೇನ ತೊಂದರೆ? ತೊಂದರೆ ಆಯಿತಿ, ಇಲ್ಲೀತನ ನಾವು ಅವಶ್ಯಕತೆಗಣುವಾಗಿ ಕೊಳ್ಳತಾ ಇದ್ದವಿ. ಈಗ ಪ್ರತಿಷ್ಟೆಗಾಗಿ ಕೊಳ್ಳತಾ ಇದ್ದೀವಿ. ಇದನ್ನೆ ನೊಬೆಲ್ ಪುರಸ್ಕೃತ ಆರ್ಥಿಕ ತಜ್ಞರಾದ ಅಮರ್ತ್ಯಸೇನರು “ಅವೈಚಾರಿಕ ಬಡವರು’’ ಅಂದರು.
ಭಾರತದ ಬಡತನ ಮತ್ತ ಜಗತ್ತಿನ ಬಡತನ ಒಂದೆ ತಕ್ಕಡಿಯಲ್ಲಿ ಇಟ್ಟು ತೂಗಬಹುದೆ? ನನ್ನ ವ್ಯಯಕ್ತಿಕ ಅಧ್ಯಯನ ಮತ್ತು ಮೂರು ದೇಶಗಳು, ಭಾರತದ ಹಲವು ರಾಜ್ಯಗಳು ನೋಡಿ, ಸಿಂದಗಿ ತಾಲೂಕಿನ ಕೊನೆಯ ಪಕ್ಷ 100 ಹಳ್ಳಿಗಳನ್ನ ನೋಡಿ, ನನಗೆ ಅರಿವು ಮೂಡಿದೆ ಹಂಗ ತೂಗಲಕ್ಕ ಬರಲ್ಲ, ಯಾಕ? ಉತ್ತರ : ಜಾತಿ ವ್ಯವಸ್ಥೆ. ಪರಿಹಾರ ಪ್ರಾತಿನಿಧ್ಯತೆ ಎಲ್ಲಿ? ಶಿಕ್ಷಣ, ಉದ್ಯೋಗ ಮತ್ತು ರಾಜಕಾರಣದಲ್ಲಿ ನನಗ ಒಮ್ಮೊಮ್ಮಿ ಅನ್ನಸ್ತಾದ “ನಂಬಿಕೆಯ’’ ವಿಚಾರದ ಸ್ಥಳಗಳಲ್ಲಿ ಪ್ರಾತಿನಿಧ್ಯ ಬಯಸಿದರ ತಪ್ಪೇನ ಅಲ್ಲ ಅಂತ ಅದಕ್ಕ ನನಗ ಉತ್ತರ ಸಿಕ್ಕಾದ. ಆದರ ಅದರ ಬಗ್ಗೆ ದ್ವಂದ್ವ/ಇಬ್ಬಗಿತನ ಇರೂದಕ್ಕ ಅದರ ಬಗ್ಗೆ ಮತ್ತೊಮ್ಮಿ ಬರೆಯೋಣ. ಈ ಪ್ರಾತಿನಿಧ್ಯ ಸ್ವಂತತ್ರ ಭಾರತದ ಕಲ್ಪನೆ? ನನಗೀರು ಮಾಹಿತಿ ಪ್ರಕಾರ ಅಲ್ಲ. ಅದೊಂದು ನಂಬಿಕೆಯಾಗಿ ಮತ್ತು ವ್ಯವಸ್ಥೆಯಾಗಿ ಚಾಲ್ತಿಯಲ್ಲಿತ್ತು. ಸ್ವತಂತ್ರ ಭಾರತದಲ್ಲಿ ಅದನ್ನ ಸಂವಿಧಾನಿಕ ತತ್ವವಾಗಿ ವ್ಯಕ್ತ ಪಡಿಸಲಾಯಿತು.
ಇದರಿಂದ “ಲಾಭ’’ ಆಯಿತಾ? ಇದಕ್ಕ ಕೊನೆ ಇರಬೇಕಾ? ಇರಬಾರದು. ಎಲಿಯವರಿಗೆ? ನಂಬಿಕೆಗಳ ಸ್ಥಳದಲ್ಲು “ನಂಬಿಕೆಯ’’ ಆಚರಣೆಗಳಲ್ಲಿ “ಪಾಲ್ಗೊಳ್ಳುವಿಕೆಗೆ’’ ಮುಕ್ತ ಅವಕಾಶ ಸಿಗುವವರೆಗೂ. ಇದಕ್ಕೆನಾದರು ಆರ್ಥಿಕ ಹೊರೆ ಇದೀಯಾ, “ನಯ್ಯಾ ಪೈಸೆದುಷ್ಟು’’ ಇಲ್ಲ. ಹಂಗಂದರೆ ಆರ್ಥಿಕವಾಗಿ ಹಿಂದೂಳಿದವರಿಗೆ ಪ್ರಾತಿನಿಧ್ಯ ಕೊಟ್ಟಿದ್ದು ಸರಿಯಾ? ತಪ್ಪು! ಆರ್ಥಿಕ ಹಿಂದೂಳಿದುದ್ದು ರಾಜ್ಯ/ದೇಶದ ರಾಜಕಾರಣ ಸಮಸ್ಯೆ, ಸಮಾಜದ ಸಮಸ್ಯೆ ಅಲ್ಲ. ಅಸ್ಪೃಶ್ಯತೆ “ಜಾತಿಯ’’ ಸಮಸ್ಯೆ. ಅದು “ಲಿಂಗಾಯತ ಅಥವಾ ವರ್ಣಾಶ್ರಮ’’ ನಿರಾಕರಿಸಿವು ಧರ್ಮದಿಂದ ಪರಿಹಾರ ಆಗುತ್ತಾ? ಇದು ಯಾರು ಪ್ರಶ್ನೆ ಕೇಳತಾರೆ ಅವರ ಮೇಲೆ ಆಧಾರಿತ ಉತ್ತರ ಹೌದು/ಇಲ್ಲ. ಪ್ರಾತಿನಿಧ್ಯ ಬಯಸಬೇಕು. ಅದೂ ನಮ್ಮ “ಪ್ರತಿಷ್ಟೆಯ ಮತ್ತು ಆರ್ಥಿಕ’’ ದೃಷ್ಟಿಕೋನದಿಂದ ಇರಬಾರದು. ಪ್ರಾತಿನಿಧ್ಯ-ಸಮಸಮಾಜದ ತತ್ವಕ್ಕ ಭದ್ರ ಬುನಾದಿ. ಸ್ಪೃಶ್ಯ ಅಸ್ಪೃಶ್ಯ ಮಾನವೀಯತೆಯ ವಿರೋಧಿ ತತ್ವ.