ಪ್ರಜಾಸ್ತ್ರ ಸುದ್ದಿ
ಕೆ.ಆರ್ ಪೇಟೆ(KR Pete): ಅನ್ನಭಾಗ್ಯ ಯೋಜನೆ ಅಡಿಯಲ್ಲಿ ನೀಡುವ ಅಕ್ಕಿ, ರಾಗಿ ಕಳಪೆಯಾಗಿದ್ದು, ಹುಳ ಆಗಿವೆ. ಅತ್ಯಂತ ಕಳಪೆಯಾಗಿವೆ ಎಂದು ಸಾರ್ವಜನಿಕರು ಪ್ರತಿಭಟನೆ ನಡೆಸಿದರು. ಆಹಾರ ಇಲಾಖೆ ಮುಂದೆ ಕಳಪೆ ಅಕ್ಕಿ, ರಾಗಿ ಇಟ್ಟು ಇಲಾಖೆ ಸಿಬ್ಬಂದಿಗೆ ದಿಗ್ಬಂದನ ಹಾಕಿದ ರೈತರು ತಮ್ಮ ಆಕ್ರೋಶ ವ್ಯಕ್ತಪಡಿಸಿದರು.

ತಾಲ್ಲೂಕಿನ 99 ನ್ಯಾಯ ಬೆಲೆ ಅಂಗಡಿಯಲ್ಲಿ ಜನರಿಗೆ ಕಳಪೆ ಅಕ್ಕಿ ರಾಗಿ ವಿತರಣೆ ಆರೋಪ ಕೇಳಿ ಬಂದಿದೆ. ಸರ್ಕಾರ ಕೊಡುವ ಅಕ್ಕಿ-ರಾಗಿ ತಿಂದರೆ ಆಸ್ಪತ್ರೆ ಅಂತೂ ಗ್ಯಾರಂಟಿ ಎಂದು ವ್ಯಂಗ್ಯವಾಡಿದ್ದಾರೆ. ದನಗಳು ಕೂಡ ತಿನ್ನದಂಥ ಕೆಟ್ಟ ಕಳಪೆ ಅಕ್ಕಿ, ರಾಗಿ ಬಡವರಿಗೆ ಸರ್ಕಾರ ನೀಡುತ್ತಾಯಿದೆ. ಇದು ಬಡವರಿಗಾಗಿ ಕಾಂಗ್ರೆಸ್ ಸರ್ಕಾರ ನೀಡಿದ ಗ್ಯಾರಂಟಿ ಎಂದು ರೈತರ ಆಕ್ರೋಶ ಹೊರ ಹಾಕಿದರು.




