ಪ್ರಜಾಸ್ತ್ರ ಸುದ್ದಿ
ನೆಲಮಂಗಲ(Nelamangala): ಮಾಜಿ ಪ್ರೇಯಿಸಿಗೆ ಅಶ್ಲೀಲ ಮೆಸೇಜ್ ಮಾಡಿದ್ದಾನೆ ಎಂದು ಯುವಕನೊಬ್ಬನನ್ನು ಅಪಹರಣ ಮಾಡಿ, ವಿವಸ್ತ್ರಗೊಳಿಸಿ ಹಲ್ಲೆ ಮಾಡಿರುವ ಘಟನೆ ನಡೆದಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆ ನೆಲಮಂಗಲ ತಾಲೂಕಿನ ಸೋಲದೇವನಹಳ್ಳಿಯಲ್ಲಿ ಈ ಘಟನೆ ನಡೆದಿದೆ. ಕುಶಾಲ್ ಅನ್ನೋ ಯುವಕ ಹಲ್ಲೆಗೊಳಗಾಗಿದ್ದಾನೆ. ಈ ಸಂಬಂಧ 11 ಜನರ ಬಂಧನವಾಗಿದ್ದು, ಇದರಲ್ಲಿ 8 ಜನರಿಗೆ ಜಾಮೀನು ಮಂಜೂರಾಗಿದೆ ಎಂದು ತಿಳಿದಿದೆ. ಇಲ್ಲಿ ಯುವತಿಯೇ ಪ್ರಮುಖ ಆರೋಪಿ ಎಂದು ತಿಳಿದು ಬಂದಿದೆ.
ಎರಡು ವರ್ಷಗಳಿಂದ ಪ್ರೀತಿಸುತ್ತಿದ್ದ ಜೋಡಿಯ ನಡುವೆ ಇತ್ತೀಚೆಗೆ ಜಗಳವಾಗಿ ಮುರಿದು ಬಿದ್ದಿದೆ. ಇದರ ನಡುವೆ ಯುವತಿ ಬೇರೊಬ್ಬ ಯವಕನನ್ನು ಪ್ರೀತಿಸುತ್ತಿದ್ದಳಂತೆ. ಇದನ್ನು ತಿಳಿದ ವಿಶಾಲ್ ಆಕೆಗೆ ಅಶ್ಲೀಲ ಮೆಸೇಜ್ ಕಳಿಸಿದ್ದಾನಂತೆ. ಇದನ್ನು ಯುವತಿ ಹುಡುಗನಿಗೆ ಕಳಿಸಿದ್ದಾಳೆ. ಹೀಗಾಗಿ ತನ್ನ ಸ್ನೇಹಿತರೊಂದಿಗೆ ಕೂಡಿಕೊಂಡು ಕುಶಾಲನನ್ನು ಅಪಹರಿಸಿ ನಿರ್ಜನ ಪ್ರದೇಶಕ್ಕೆ ಕರೆದುಕೊಂಡು ಹೋಗಿದ್ದಾರೆ. ಅಲ್ಲಿ ಬಟ್ಟೆ ಬಿಚ್ಚಿಸಿ ಹಲ್ಲೆ ಮಾಡಿದ್ದಾರೆ. ಮರ್ಮಾಂಗ ತುಳಿದು ಚಿತ್ರಹಿಂಸೆ ನೀಡಿರುವ ವಿಡಿಯೋ ವೈರಲ್ ಆಗಿದೆ.
ಈ ಘಟನೆ ನಟ ದರ್ಶನ್ ಹಾಗೂ ಪವಿತ್ರಾಗೌಡ ಪ್ರಕರಣಕ್ಕೆ ಹೋಲಿಕೆ ಮಾಡಲಾಗುತ್ತಿದೆ. ಪವಿತ್ರಾಗೌಡಳಂತೆ ಇಲ್ಲಿ ಯುವತಿ ಸಹ ತನ್ನ ಸ್ನೇಹಿತರಿಗೆ ಹೇಳಿ ಹಲ್ಲೆ ಮಾಡಿಸಿದ್ದಾಳೆ. ಈ ವೇಳೆ ಯುವತಿ ಸಹ ಸ್ಥಳದಲ್ಲಿದ್ದು, ಯುವಕನ ಮೇಲೆ ಹಲ್ಲೆ ಮಾಡಿದ್ದಾಳೆ ಎಂದು ತಿಳಿದು ಬಂದಿದೆ. ಈ ಸಂಬಂಧ ಸೋಲದೇವನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.