ಪಜಾಸ್ತ್ರ ಸುದ್ದಿ
ಅಮೇಠಿ(Amethi): ಲೋಕಸಭಾ ವಿಪಕ್ಷ ನಾಯಕ, ಅಮೇಠಿ ಲೋಕಸಭಾ ಕ್ಷೇತ್ರಕ್ಕೆ ರಾಹುಲ್ ಗಾಂಧಿ ವಿರುದ್ಧ ಪೋಸ್ಟರ್ ಅಂಟಿಸಲಾಗಿದೆ. ಕ್ಷೇತ್ರಕ್ಕೆ ಭೇಟಿ ನೀಡುವ ಕೆಲ ಗಂಟೆಗಳ ಮುನ್ನ ನಗರದ ಹಲವು ಕಡೆಗಳಲ್ಲಿ ಉಗ್ರರ ಬೆಂಬಲಿಗ ರಾಹುಲ್ ಗಾಂಧಿ ಎಂದು ಪೋಸ್ಟರ್ ಅಂಟಿಸಲಾಗಿದೆ. ಕಾಂಗ್ರೆಸ್ ಕಚೇರಿ ಹತ್ತಿರದಲ್ಲಿಯೂ ಈ ಪೋಸ್ಟರ್ ಅಂಟಿಸಲಾಗಿದೆ.
ಮಂಗಳವಾರ ರಾಹುಲ್ ಗಾಂಧಿ ಪ್ರತಿನಿಧಿಸುವ ರಾಯ್ ಬರೇಲಿಗೆ ಭೇಟಿ ಕೊಟ್ಟಿದ್ದರು. ಇಂದು ಅಮೇಠಿ, ಇದರ ನಂತರ ಕಾನ್ಪುರಕ್ಕೆ ಭೇಟಿ ನೀಡಲಿದ್ದಾರೆ. ಹೀಗಿರುವಾಗ ಕೆಲ ಕಿಡಿಗೇಡಿಗಳು ನಗರದ ತುಂಬಾ ರಾಹುಲ್ ಗಾಂಧಿ ಭಯೋತ್ಪಾದಕರ ಬೆಂಬಲಿಗ ಎಂದು ಪೋಸ್ಟರ್ ಅಂಟಿಸಿದ್ದಾನೆ.