ಪ್ರಜಾಸ್ತ್ರ ಸುದ್ದಿ
ನವದೆಹಲಿ(New Delhi): ಸೋಮವಾರ ಮಂಡಿಸಬೇಕು ಎಂದುಕೊಂಡಿದ್ದ ಒಂದು ದೇಶ ಒಂದು ಚುನಾವಣೆ ಮಸೂದೆ ಮುಂದೂಡಿಕೆ ಮಾಡಲಾಗಿದೆ. ವಿವಿಧ ಮಸೂದೆಗಳಿಗೆ ಸೋಮವಾರ ಅಂಗೀಕಾರ ಸಿಕ್ಕ ಬಳಿಕ ವಾರದ ಕೊನೆಯಲ್ಲಿ ಮಂಡಿಸಬಹುದು ಎಂದು ಹೇಳಲಾಗುತ್ತಿದೆ. ಈ ಬಗ್ಗೆ ಕರುಡು ಪ್ರತಿಯನ್ನು ಸಂಸದರಿಗೆ ನೀಡಲಾಗಿದೆ. ಲೋಕಸಭೆ ಹಾಗೂ ರಾಜ್ಯಸಭೆಗೆ ಏಕಕಾಲದಲ್ಲಿ ಚುನಾವಣೆ ನಡೆಸುವುದು ಈ ಮಸೂದೆಯ ಉದ್ದೇಶವಾಗಿದೆ.
ಸಂವಿಧಾನ(129ನೇ ತಿದ್ದುಪಡಿ, ಒಂದು ದೇಶ ಒಂದು ಚುನಾವಣೆ) ಮಸೂದೆ ಹಾಗೂ ಕೇಂದ್ರಾಡಳಿತ ಪ್ರದೇಶಗಳ ಕಾನೂನುಗಳ ಮಸೂದೆ ಸೋಮವಾರ ಮಂಡಿಸಲು ಪಟ್ಟಿ ಸಿದ್ಧಪಡಿಸಲಾಗಿತ್ತು. ಈಗ ಮುಂದೂಡಿಕೆಯಾಗಿದೆ. ಮಾಜಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಿ 18 ಸಾವಿರಕ್ಕೂ ಹೆಚ್ಚು ಪುಟಗಳ ವರದಿ ಸಿದ್ಧಪಡಿಸಲಾಗಿದೆ. ಡಿಸೆಂಬರ್ 20ರಂದು ಲೋಕಸಭೆ ಚಳಿಗಾಲದ ಅಧಿವೇಶನ ಮುಗಿಯಲಾಗಿದ್ದು, ಇದು ಯಾವಾಗ ಮಂಡಿಸಲಾಗುತ್ತೆ. ಇದಕ್ಕೆ ವಿಪಕ್ಷಗಳ ಉತ್ತರ ಏನಾಗಿರುತ್ತೆ ಎನ್ನುವ ಕುತೂಹಲವಿದೆ.