Ad imageAd image

ಸಿಂದಗಿಯಲ್ಲಿ ಭರ್ಜರಿಯಾಗಿ ಸುರಿದ ಮಳೆ

Nagesh Talawar
ಸಿಂದಗಿಯಲ್ಲಿ ಭರ್ಜರಿಯಾಗಿ ಸುರಿದ ಮಳೆ
WhatsApp Group Join Now
Telegram Group Join Now

ಪ್ರಜಾಸ್ತ್ರ ಸುದ್ದಿ

ಸಿಂದಗಿ(Sindagi): ಕಳೆದ ಎರಡು ದಿನಗಳಿಂದ ಸಾಕಷ್ಟು ಬಿಸಿಲಿನಿಂದ ಬಳಲಿದ್ದ ಜನತೆಗೆ ಮಂಗಳವಾರ ಸಂಜೆ ಸುರಿದ ಭರ್ಜರಿ ಮಳೆಯಿಂದ ಒಂದಿಷ್ಟು ತಂಪಾಗಿದೆ. ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ತಾಲೂಕಿನಾದ್ಯಂತ ಮಳೆಯಾಗಿದೆ. ಇದರಿಂದಾಗಿ ಹಲವು ಕಡೆ ಮನೆಗಳಿಗೆ ನೀರು ನುಗ್ಗಿದೆ. ಸಂಚಾರಕ್ಕೂ ಒಂದಿಷ್ಟು ಅಡಚಣೆಯಾಗಿದೆ. ವಿವಿಧ ಗ್ರಾಮಗಳಲ್ಲಿ ಮಳೆಯಿಂದ ಅವಾಂತರ ಸೃಷ್ಟಿಯಾಗಿದೆ.

ಮಂಗಳವಾರ ಸಂಜೆ ಸುಮಾರು 6 ಗಂಟೆಯಿಂದ 7.30ರ ತನಕ ಭಾರೀ ಮಳೆಯಾಗಿದೆ. ಹೀಗಾಗಿ ಹೊಲಗಳಲ್ಲಿಯೂ ನೀರು ನಿಂತುಕೊಂಡಿದೆ. ಕೆಲವು ಕಡೆ ಮರಗಳು ಬಿದ್ದಿವೆ ಎಂದು ಹೇಳಲಾಗುತ್ತಿದೆ. ಇನ್ನು ಒಂದು ಗಂಟೆಗೂ ಹೆಚ್ಚು ಕಾಲ ವಿದ್ಯುತ್ ಕಡಿತದಿಂದಾಗಿಯೂ ಸಾರ್ವಜನಿಕರು ಪರದಾಡಬೇಕಾಯಿತು. ಸಿಂದಗಿ ಸೇರಿದಂತೆ ಆಲಮೇಲ ಭಾಗದಲ್ಲಿಯೂ ಉತ್ತಮ ಮಳೆಯಾಗಿದೆ ಎಂದು ತಿಳಿದು ಬಂದಿದೆ.

WhatsApp Group Join Now
Telegram Group Join Now
Share This Article