ಪ್ರಜಾಸ್ತ್ರ ಸುದ್ದಿ
ಮೈಸೂರು(Mysore): ದಸರಾಗೆ ಸಂಬಂಧಿಸಿದಂತೆ ಇಲ್ಲಿಯ ತನಕ ಆಗಿರುವ ರಾಜಕೀಯ ಸಾಕು. ಇದನ್ನು ಮುಂದುವರೆಸುವುದು ಬೇಡ. ಸರ್ಕಾರದವರು ಅವರಿಗೆ ಬೇಕಾದಂತೆ ದಸರಾ ಮಾಡುತ್ತಾರೆ. ಅದು ನಮ್ಮ ಪರಂಪರೆಯ ಭಾಗವಲ್ಲ. ನಮ್ಮದು ಖಾಸಗಿಯಾಗಿ ನಡೆಯುತ್ತದೆ ಎಂದು ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್ ಹೇಳಿದರು.
ಶನಿವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಚಾಮುಂಡೇಶ್ವರಿ ಯದುವಂಶದ ದೇವರು. ನಮ್ಮ ಕುಲದೇವಿ. ದೇವಸ್ಥಾನದಲ್ಲಿ ಹಿಂದೂ ಧಾರ್ಮಿಕ ವಿಧಿ ವಿಧಾನದಂತೆ ಪೂಜೆ ನಡೆಯುತ್ತದೆ. ರಾಜಕಾರಣಿಗಳು ಏನೇ ಹೇಳಲಿ. ದೇವಸ್ಥಾನ ಹಾಗೂ ನಮ್ಮ ಮನೆತನ ನಡುವೆ ನ್ಯಾಯಾಲಯದಲ್ಲಿ ಹೋರಾಟ ನಡೆಯುತ್ತಿದೆ. ಚಾಮುಂಡೇಶ್ವರಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ ರಚನೆಯಾಗಿದ್ದರೂ ಅದು ಅಧಿಕೃತವಲ್ಲ. ಕೋರ್ಟ್ ಆದೇಶ ಬಂದ ಬಳಿಕ ಎಲ್ಲ ಸ್ಪಷ್ಟವಾಗಲಿದೆ ಎಂದರು.