ಪ್ರಜಾಸ್ತ್ರ ಸುದ್ದಿ
ತುಮಕೂರು(Tumakoru): ಸೋಡಿಯಂ ಮೆಟಲ್ ಬಳಸಿ ಕೃಷಿ ಹೊಂಡದಲ್ಲಿ ಸ್ಫೋಟ ನಡೆಸಿದ ಪ್ರಕರಣ ಸಂಬಂಧ ಬಿಗ್ ಬಾಸ್ ಮಾಜಿ ಸ್ಪರ್ಧಿ ಪ್ರತಾಪನನ್ನು ಪೊಲೀಸರು ಬಂಧಿಸಿದ್ದಾರೆ. ಭಾರತೀಯ ದಂಡ ಸಂಹಿತೆಯ ಸೆಕ್ಷನ್ 288 ಸ್ಫೋಟವಸ್ತು ನಿಯಂತ್ರಣ ಕಾಯ್ದೆ 3ರಡಿ ಮಿಡಿಗೇಶಿ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ವಶಕ್ಕೆ ಪಡೆದಿದ್ದಾರೆ. ಮಧುಗಿರಿ ತಾಲೂಕಿನ ಜನಕಲೋಟಿ ಗ್ರಾಮದ ಹತ್ತಿರದ ಕೃಷಿಹೊಂಡದಲ್ಲಿ ಈ ರೀತಿ ಸ್ಫೋಟದ ವಿಡಿಯೋವನ್ನು ಲೈವ್ ಮೂಲಕ ತೋರಿಸಿದ್ದ. ಇದರ ವಿರುದ್ಧ ಜನರು ಆಕ್ರೋಶ ವ್ಯಕ್ತಪಡಿಸಿ, ಬಂಧನಕ್ಕೆ ಆಗ್ರಹಿಸಿದ್ದರು.
ವಿಜ್ಞಾನದ ಹೆಸರಿನಲ್ಲಿ ಈ ರೀತಿ ಲೈವ್ ವಿಡಿಯೋ ಮಾಡಿದ್ದಾನೆ. ಸೋಡಿಯಂ ಮೆಟಲ್ ನೀರಿಗೆ ಹಾಕಿದಾಗ ದೊಡ್ಡಮಟ್ಟದ ಸ್ಫೋಟ ಹಾಗೂ ಶಬ್ಧ ಬಂದಿದೆ. ಈ ರೀತಿಯ ಹುಚ್ಚಾಟಕ್ಕೆ ಸಾರ್ವಜನಿಕರು ಕಿಡಿ ಕಾರಿದ್ದಾರೆ. ಈ ಹಿಂದೆ ಡ್ರೋನ್ ಕಂಡು ಹಿಡಿದಿದ್ದೀನಿ. ವಿಶ್ವದ ಹಲವು ದೇಶಗಳನ್ನು ಸುತ್ತಿದೀನಿ. ಅದು ಇದು ಅಂತೆಲ್ಲ ಕಥೆ ಕಟ್ಟಿದ್ದ. ಇದನ್ನು ನಂಬಿ ಮೋಸ ಹೋದ ಜನರಿಗೆ ಲೆಕ್ಕವಿಲ್ಲ. ಹೀಗಾಗಿ ಇತ ಡ್ರೋನ್ ಪ್ರತಾಪ್ ಅಂತಾನೆ ಹೆಸರು ಮಾಡಿದ. ಜನರನ್ನು ಮೋಸ ಮಾಡುವವರನ್ನ, ಅಕ್ರಮದ ಹಾದಿ ಹಿಡಿದವರನ್ನೇ ಹೀರೋ ಮಾಡುತ್ತಿರುವ ಕೆಲವೊಂದಿಷ್ಟು ಟಿವಿ ಚಾನಲ್ ಗಳನ್ನು ಇವನನ್ನು ಕೆಲವು ರಿಯಲಾಟಿ ಶೋಗಳಿಗೆ ಅವಕಾಶ ನೀಡಿದರು. ಇದೀಗ ಸಿನಿಮಾ ಬೇರೆ ಮಾಡ್ತಿದ್ದಾನೆ. ನಡುವೆ ಇಂಥಾ ಹುಚ್ಚಾಟ ಬೇರೆ.