ಪ್ರಜಾಸ್ತ್ರ ಸುದ್ದಿ
ಮೈಸೂರು(Mysore): ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ತಾಕತ್ತಿದ್ದರೆ ಕ್ಯಾತಮಾರನಹಳ್ಳಿ ಮಸೀದಿಯನ್ನು ಮತ್ತೆ ತೆರೆಯಲಿ ನೋಡೋಣ ಎಂದು ಬಿಜೆಪಿ ಮಾಜಿ ಸಂಸದ ಪ್ರತಾಪ್ ಸಿಂಹ ಹೇಳಿದ್ದಾರೆ. ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನಿವಾಸಿಗಳು ಇರುವ ಜಾಗದಲ್ಲಿ ಅನಧಿಕೃತವಾಗಿ ಮಸೀದಿಯನ್ನು ನಿರ್ಮಿಸಲಾಗಿದೆ. ರಾಜು ಹತ್ಯೆಯ ಬಳಿಕ ಮಸೀದಿ ಬಂದ್ ಆಗಿದೆ. ತಾಕತ್ತಿದ್ದರೆ ಮಸೀದಿಯನ್ನು ಸಿಎಂ ಮತ್ತೆ ತೆರೆಯಲಿ ನೋಡೋಣ ಎಂದು ಬಿಜೆಪಿ ಕಾರ್ಯಕರ್ತನಾಗಿ ಸವಾಲು ಹಾಕುತ್ತೇನೆ ಎಂದರು.
ಬಂದ್ ಆಗಿರುವ ಮಸೀದಿ ಮತ್ತೆ ತೆರೆಯಲು ಸಿದ್ದರಾಮಯ್ಯನವರು ಮುಂದಾಗಿದ್ದಾರೆ. ಪೂರಕ ದಾಖಲೆಗಳನ್ನು ತೆಗೆದುಕೊಂಡು ಬನ್ನಿ ಎಂದು ಹೇಳಿದ್ದಾರೆ. ಈ ಬಗ್ಗೆ ಚರ್ಚೆ ಮಾಡಲು ಜಿಲ್ಲಾಧಿಕಾರಿ ಕಚೇರಿಯಲ್ಲಿ ಸಭೆ ಕರೆದಿದ್ದಾರೆ. ಇದನ್ನು ನಾವು ಸಂಪೂರ್ಣವಾಗಿ ಖಂಡಿಸುತ್ತೇವೆ. ರಾಜ್ಯದಲ್ಲಿ ತಾಲಿಬಾನ್ ಸರ್ಕಾರ ನಡೆಯುತ್ತಿದೆ. ಸಿದ್ದರಾಮಯ್ಯ ಮೊದಲ ಬಾರಿ ಸಿಎಂ ಆಗಿದ್ದಾಗ 1,600 ದುರುಳರ ವಿರುದ್ಧ 175 ಪ್ರಕರಣಗಳನ್ನು ಖುಲಾಸೆ ಮಾಡಿದ್ದಾರೆ. ಬೆಂಗಳೂರಲ್ಲಿ ರುದ್ರೇಶ್, ಕೊಡಗಿನಲ್ಲಿ ಕುಟ್ಟಪ್ಪ, ಮೈಸೂರಿನಲ್ಲಿ ರಾಜು ಹತ್ಯೆ ಆಯಿತು. ನಿಮಗೆ ಮುಸ್ಲಿಂರ ಮತ ಬಿಟ್ಟು ಬೇರೆಯವರ ಮತ ಬೇಡ್ವಾ ಎಂದು ಕಿಡಿ ಕಾರಿದರು.